ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಗೆ ಸರ್ಪ ಕಾಟ

Former governor margaret alva faces snakes havoc
Highlights

ಮಾಜಿ ರಾಜ್ಯಪಾಲರಾದ ಮಾರ್ಗರೇಟ್ ಆಳ್ವ ಅವರಿಗೆ ಸರ್ಪ ಗಳ ಕಾಟ ಶುರುವಾಗಿದೆ. ಈ ಸಂಬಂಧ ಅವರು ಉಪಮುಖ್ಯಮಂತ್ರಿ  ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಾ.ಜಿ ಪರಮೇಶ್ವರ್ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. 

ಬೆಂಗಳೂರು : ಮಾಜಿ ರಾಜ್ಯಪಾಲರಾದ ಮಾರ್ಗರೇಟ್ ಆಳ್ವ ಅವರಿಗೆ ಸರ್ಪ ಗಳ ಕಾಟ ಶುರುವಾಗಿದೆ. ಈ ಸಂಬಂಧ ಅವರು ಉಪಮುಖ್ಯಮಂತ್ರಿ  ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಾ.ಜಿ ಪರಮೇಶ್ವರ್ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. 

ಕಳೆದ ತಿಂಗಳಷ್ಟೇ ಮಾರ್ಗರೇಟ್ ಆಳ್ವಾ ಪತಿ ನಿಧನರಾಗಿದ್ದು, ಈ ನಿಟ್ಟಿನಲ್ಲಿ ಸಾಂತ್ವನ ಹೇಳಲು ಡಾ. ಜಿ ಪರಮೇಶ್ವರ್ ಅವರು ಅವರ ನಿವಾಸಕ್ಕೆ ತೆರಳಿದ್ದರು. 

ಪ್ರತಿಷ್ಟಿತ ವ್ಯಕ್ತಿಗಳು  ವಾಸವಾಗಿರುವ ಆರ್ ಎಂ ವಿ ಬಡಾವಣೆಯಲ್ಲಿ ಇರುವ ಮಾರ್ಗರೇಟ್ ಆಳ್ವಾ ನಿವಾಸಕ್ಕೆ ತೆರಳಿದ್ದ ವೇಳೆ ಅವರು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ಸರ್ಪಗಳು ಇಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ. 

ಇಂತಹಾ ಸ್ಥಳದಲ್ಲಿಯೇ ಹೀಗಾದರೆ ಗತಿ ಏನು ಎಂದು ಮಾಜಿ ರಾಜ್ಯಪಾಲೆ ತಮ್ಮ ಅಳಲನ್ನು ತೋಡಿಕೊಂಡಿದ್ದು, ಈ ಸಂಬಂಧ ಕ್ರಮ ಕೈಗೊಳ್ಳುವುದಾಗಿ ಪರಮೇಶ್ವರ್  ಭರವಸೆ ನೀಡಿದ್ದಾರೆ.

loader