Asianet Suvarna News Asianet Suvarna News

ಬಿಎಸ್‌ವೈಗೆ ಕಣ್ಣು ಮುಚ್ಚಿದರೆ 3 ನೇ ಮಹಡಿ ಕಾಣುತ್ತಂತೆ!

ಯಡಿಯೂರಪ್ಪ ಬಹಳ ಕನಸು ಕಾಣುತ್ತಿದ್ದಾರೆ. ಕಣ್ಣು ಮುಚ್ಚಿದರೆ ಅವರಿಗೆ ಮೂರನೇ ಮಹಡಿ ಕಾಣುತ್ತೆ.  ಹೇಗಾದ್ರೂ ಮಾಡಿ ವಿಧಾನಸೌಧಕ್ಕೆ ಹೋಗಬೇಕು ಚೀಫ್ ಮಿನಿಸ್ಟರ್ ಆಗಬೇಕು ಅಂದುಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ. 
 

Former CM Siddaramaiah slams B S Yadiyurappa
Author
Bengaluru, First Published Nov 11, 2018, 3:36 PM IST
  • Facebook
  • Twitter
  • Whatsapp

ಚಿಕ್ಕಮಗಳೂರು (ನ. 11):  ಯಡಿಯೂರಪ್ಪ ಬಹಳ ಕನಸು ಕಾಣುತ್ತಿದ್ದಾರೆ. ಕಣ್ಣು ಮುಚ್ಚಿದರೆ ಅವರಿಗೆ ಮೂರನೇ ಮಹಡಿ ಕಾಣುತ್ತೆ.  ಹೇಗಾದ್ರೂ ಮಾಡಿ ವಿಧಾನಸೌಧಕ್ಕೆ ಹೋಗಬೇಕು ಚೀಫ್ ಮಿನಿಸ್ಟರ್ ಆಗಬೇಕು ಅಂದುಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ. 

ಯಡಿಯೂರಪ್ಪ ಅಧಿಕಾರಕ್ಕಾಗಿ ವಾಮಮಾರ್ಗ ಹಿಡಿಯುತ್ತಿದ್ದಾರೆ. ಅವರಿಗೆ ಮೆಜಾರಿಟಿ ಬಂದಿದೆಯಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.  ಬಿಜೆಪಿಗೆ ಬಂದಿರುವುದೇ 104 ಸೀಟು.  ಬಿಜೆಪಿಯವರ ಮಾತಿಗೆ ತಾಳಮೇಳ ಇಲ್ಲ. ಅವರ ಮಾತಿಗೆ ಕಿಮ್ಮತ್ತಿಲ್ಲ ಬಿಡಿ. ಬಿಜೆಪಿಯವರು ಕಾಂಗ್ರೆಸ್ ನಲ್ಲಿ ಸಮನ್ವಯ ಇಲ್ಲ ಅಂತಾರೆ.  ನಮ್ಮಲ್ಲಿ ಸಮನ್ವಯತೆ ಇದ್ದಿದ್ದಕ್ಕೆ ನಾಲ್ಕು ಕ್ಷೇತ್ರಗಳಲ್ಲಿ ಗೆದ್ದಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

ಬಿಜೆಪಿಯವರು ಆಧಾರ ರಹಿತ ಆರೋಪ ಮಾಡುತ್ತಾರೆ. ಅವರ ಮಾತಿಗೆ ಕಿಮ್ಮತ್ತಿಲ್ಲ.  ಸಮನ್ವಯತೆ ಇದ್ದಿದ್ದಕ್ಕೆ ಬಳ್ಳಾರಿ ರಾಮನಗರ ಮಂಡ್ಯ ಜಮಖಂಡಿಯಲ್ಲಿ ನಾವು ಗೆದ್ದಿದ್ದು ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 
 

Follow Us:
Download App:
  • android
  • ios