ಬೆಂಗಳೂರು [ಜು.23] : ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಪ್ರಹಸನಕ್ಕೆ ಕೊನೆ ಇಲ್ಲದಂತಾಗಿದೆ. ಈಗಾಗಲೇ ಮೂರು ಬಾರಿ ವಿಶ್ವಾಸಮತಕ್ಕೆ ನೀಡಿದ್ದ ಡೆಡ್ ಲೈನ್ ಮುಗಿದಿದೆ. ಅತ್ತ ಅತೃಪ್ತರು ರಾಜೀನಾಮೆ ನೀಡಿ ಮುಂಬೈನಲ್ಲೇ ಉಳಿದಿದ್ದರೆ, ಇತ್ತ ಸಿದ್ದರಾಮಯ್ಯ ಕೂಡ ರಾಜೀನಾಮೆ ಬಾಂಬ್ ಸಿಡಿಸಿದ್ದಾರೆ.

ಸಾಮಾನ್ಯ ಜನರಿಗೂ ರೇಜಿಗೆ ಹುಟ್ಟಿಸುವ ರಾಜಕೀಯ ನಾಟಕ ಸ್ವತಃ ರಾಜಕೀಯ ನಾಯಕರನ್ನು ಕಂಗೆಡಿಸಿದಂತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ರಾಜೀನಾಮೆ ನೀಡುವ ಮಾತಾಡಿದ್ದಾರೆ. 

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬದಾಮಿ ಕ್ಷೇತ್ರದ ಶಾಸಕ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬಳಿ "ಏಯ್ ನೋಡಪ್ಪ.. ನಾನು ರಾಜೀನಾಮೆ ಕೊಟ್ಟುಬಿಡ್ತೇನೆ.." ಎಂದು ಹೇಳಿದ್ದಾರೆ.

ವಿಶ್ವಾಸಮತದ ಹೆಸರಿನಲ್ಲಿ ಕಲಾಪ ಎಳೆದಾಡುತ್ತಿದ್ದು, ಚರ್ಚೆ ವೇಳೆ ನೀವು ಮಾತನಾಡಿ ಸರ್ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಕ್ಕೆ ಈ ರೀತಿ ರಾಜೀನಾಮೆ ವಿಚಾರವೆತ್ತಿ ಪ್ರತಿಕ್ರಿಯಿಸಿದ್ದಾರೆ. 

ಇದರಿಂದ ಸಿದ್ದರಾಮಯ್ಯ ಕೂಡ ಹೈ ಡ್ರಾಮಾಗೆ ಕಂಗೆಟ್ಟರಾ ಎನ್ನುವ ಶಂಕೆ ಮೂಡಿದೆ. ಅತ್ತ ಬಿಜೆಪಿ ನಾಯಕರಿಗೂ ಗುಡ್ ಲಕ್ ಎಂದಿದ್ದು, ಸರ್ಕಾರ ಪತನವಾಗುವುದು ಖಚಿತವೇ ಎನ್ನುವ ಅನುಮಾನವನ್ನೂ ಹುಟ್ಟುಹಾಕಿದೆ.