‘ನೀ ಆ ರೀತಿ ಆಗ್ಬೇಡ’ ನೂತನ ಸಚಿವನಿಗೆ ಸಿದ್ದರಾಮಯ್ಯ ಬುದ್ದಿಮಾತು

ನೂತನ ಸಚಿವರೊಬ್ಬರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ನಗುತ್ತಲೆ ಬುದ್ದಿ ಹೇಳಿದ ಪ್ರಸಂಗ ಇಂದು ಮೈಸೂರಿನಲ್ಲಿ ನಡೆದಿದೆ.  ಮೈಸೂರಿನ ತಮ್ಮ ನಿವಾಸಕ್ಕೆ ಆಗಮಿಸಿದ ನೂತನ ಸಚಿವ ಪುಟ್ಟರಂಗಶೆಟ್ಟಿಗೆ, ಏನ್ ಪುಟ್ಟರಂಗಶೆಟ್ಟಿರೀ ಅಧಿಕಾರ ಸ್ವೀಕಾರ ಮಾಡಿದ್ರಾ? ಅಧಿಕಾರಿಗಳ‌ ಜೊತೆ ಸಭೆ ನಡೆಸಿದ್ರಾ? ಎಂದು ಪುಟ್ಟರಂಗಶೆಟ್ಟಿಯನ್ನು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಅಧಿಕಾರ ತೆಗೆದುಕೊಂಡಿದ್ದೀನಿ ಸಭೆ ನಡೆಸಿಲ್ಲ ಎಂದ ಸಚಿವ ಪುಟ್ಟರಂಗಶೆಟ್ಟಿ. ಅಧಿಕಾರ ಬಂದ ಮೇಲೆ ಎಲ್ಲರು ಕಣ್ಣಿಗೆ ಕಾಣ್ತಿದ್ದಾರಾ ಅಥವ ಇಲ್ವಾ ? ಪುಟ್ಟರಂಗಶೆಟ್ಟಿಯನ್ನ ವ್ಯಂಗ್ಯವಾಗಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಸಿರಿ ಬಂದೋರಿಗೆ ಜನ ಕಣ್ಣಿಗೆ ಕಾಣೋಲ್ಲ ಎಂಬ ಮಾತಿದೆ. ನೀನು ಆ ರೀತಿ ಆಗಬೇಡ ಎಂದು ಬುದ್ದಿ ಹೇಳಿದ ಸಿದ್ದರಾಮಯ್ಯ. ಗಾದೆ ಮಾತನ್ನ ಉಲ್ಲೇಖಿಸಿ ಸಿದ್ದರಾಮಯ್ಯ ಬುದ್ದಿ ಹೇಳಿದ್ದಾರೆ.

Comments 0
Add Comment