ಹೈದ್ರಾಬಾದ್‌[ಸೆ.22]: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ಸಂಸತ್ತಿನ ಮುಂಭಾಗದಲ್ಲಿ ತಮ್ಮ ವಿಶೇಷ ರೀತಿಯ ಪ್ರತಿಭಟನೆ ಮೂಲಕ ಖ್ಯಾತರಾಗಿದ್ದ ತೆಲುಗು ದೇಶಂ ಪಕ್ಷ(ಟಿಡಿಪಿ)ದ ಮಾಜಿ ಸಂಸದ ನಾರಮಲ್ಲಿ ಶಿವಪ್ರಸಾದ್‌(68) ಅವರು ಶನಿವಾರ ಕಿಡ್ನಿ ವೈಫಲ್ಯದಿಂದ ಇಹಲೋಕ ತ್ಯಜಿಸಿದ್ದಾರೆ.

2013-14ರ ಆಂಧ್ರಪ್ರದೇಶ ವಿಭಜನೆ ಸಂದರ್ಭ ಹಾಗೂ 2018-19ನೇ ಸಾಲಿನಲ್ಲಿ ಆಂಧ್ರಪ್ರದೇಶದ ಅಭಿವೃದ್ಧಿಗೆ ವಿಶೇಷ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಟಿಡಿಪಿ ಪ್ರತಿಭಟನೆಯಲ್ಲಿ ವಿಶಿಷ್ಟ ರೀತಿಯ ಉಡುಗೆ-ತೊಡುಗೆಯೊಂದಿಗೆ ಆಗಮಿಸಿ ಗಮನ ಸೆಳೆದಿದ್ದರು.

ಟಾಲಿವುಡ್‌ನ ಖ್ಯಾತ ನಾಯಕ ಚಿರಂಜೀವಿ ಸೇರಿದಂತೆ ಇತರರ ಜೊತೆ ಶಿವಪ್ರಸಾದ್‌ ಅವರು ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು.