ವಿಧಾನಸೌಧದ ಬಳಿ ಸಿಕ್ಕ ಕೋಟ್ಯಂತರ ರೂ. ಹಣ ಸಾಗಣೆಗೆ ಹೊಸ ಟ್ವಿಸ್ಟ್ ದೊರಕಿದ್ದು, ಎಲ್ಲಿಂದ ಈ ಹಣ ಬಂತು? ಯಾರಿಗೆ ತಲುಪಿಸಲು ಕೊಂಡೊಯ್ಯುತ್ತಿದ್ದ ಹಣ, ಈ ಎಲ್ಲ ಮಾಹಿತಿ ಮಾಜಿ ಸಿಎಂ ಯಡಿಯೂರಪ್ಪಗೆ ಗೊತ್ತಿದೆ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಹಾಸನ (ಅ.24): ವಿಧಾನಸೌಧದ ಬಳಿ ಸಿಕ್ಕ 1.91 ಕೋಟಿ ರೂ. ಹಣ ಯಾರದ್ದು ಎಂಬ ಪ್ರಶ್ನೆಗೆ ಉತ್ತರ ದೊರಕಿದ್ದು, ಹಣ ಯಾರದ್ದು ಅನ್ನುವುದು ಮಾಜಿ ಸಿಎಂ ಯಡಿಯೂರಪ್ಪಗೆ ಗೊತ್ತಂತೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ವಿಧಾನಸೌಧದ ಬಳಿ ಸಿಕ್ಕ ಕೋಟ್ಯಂತರ ರೂ. ಹಣ ಸಾಗಣೆಗೆ ಹೊಸ ಟ್ವಿಸ್ಟ್ ದೊರಕಿದ್ದು, ಎಲ್ಲಿಂದ ಈ ಹಣ ಬಂತು? ಯಾರಿಗೆ ತಲುಪಿಸಲು ಕೊಂಡೊಯ್ಯುತ್ತಿದ್ದ ಹಣ, ಈ ಎಲ್ಲ ಮಾಹಿತಿ ಮಾಜಿ ಸಿಎಂ ಯಡಿಯೂರಪ್ಪಗೆ ಗೊತ್ತಿದೆ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಹಣದ ಬಗ್ಗೆ ಯಡಿಯೂರಪ್ಪ ಬಳಿ ಸ್ಪಷ್ಟ ಮಾಹಿತಿ ಇದೆ ಅನ್ನುವುದು ನನಗೆ ಗೊತ್ತಿದೆ, ಯಡಿಯೂರಪ್ಪ ಅವರನ್ನು ಕೇಳಿದರೆ ಸತ್ಯ ಹೇಳುತ್ತಾರೆ ಅನ್ನೋ ನಂಬಿಕೆ ಇದೆ. ಈ ಹಣದ ಬಗ್ಗೆ ಯಡಿಯೂರಪ್ಪ ಬಿಟ್ಟು ಬೇರೆ ಯಾರನ್ನೂ ಕೇಳುವ ಅಗತ್ಯವಿಲ್ಲ ಎಂದು ಹಾಸನದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.