ಬಿಜೆಪಿ ಭೀಷ್ಮ ಎಲ್.ಕೆ. ಅಡ್ವಾಣಿಗೆ ಇಂದು 91ನೇ ಜನ್ಮದಿನ! ಅವಿಭಜಿತ ಭಾರತದ ಕರಾಚಿಯಲ್ಲಿ 1927ರಲ್ಲಿ ಜನಿಸಿದ ಅಡ್ವಾಣಿ! ರಾಷ್ಟ್ರ ಮಟ್ಟದಲ್ಲಿ ಬಿಜೆಪಿಗೆ ಭದ್ರ ನೆಲೆ ಕಲ್ಪಿಸುವಲ್ಲಿ ಅಡ್ವಾಣಿ ಪಾತ್ರ ಮಹತ್ವದ್ದು! ಅಡ್ವಾಣಿ ಜನ್ಮದಿನಕ್ಕೆ ಶುಭ ಕೋರಿದ ಪ್ರಧಾನಿ ನರೇಂದ್ರ ಮೋದಿ! ಜನ್ಮದಿನದ ಶುಭ ಕೋರಿ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್
ನವದೆಹಲಿ(ನ.8): ಇಂದು ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರ 91ನೇ ಜನ್ಮದಿನ. ಭಾರತದ ರಾಜಕಾರಣದ ಅತ್ಯಂತ ಪ್ರಮುಖ ವ್ಯಕ್ತಿ ಅಡ್ವಾಣಿ 1927ರಲ್ಲಿ ಅವಿಭಜಿತ ಭಾರತದ ಕರಾಚಿಯಲ್ಲಿ ಜನಿಸಿದರು.
ರಾಷ್ಟ್ರ ಮಟ್ಟದಲ್ಲಿ ಬಿಜೆಪಿಗೆ ಭದ್ರ ನೆಲೆ ಕಲ್ಪಿಸಲು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಅಡ್ವಾಣಿ ಅವರ ಕೊಡುಗೆ ಅಪಾರ. ಬಿಜೆಪಿಯ ಉಕ್ಕಿನ ಮುನುಷ್ಯ ಎಂದೇ ಖ್ಯಾತಿ ಗಳಿಸಿದ್ದ ಅಡ್ವಾಣಿ ದೇಶದ ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಹೆಗ್ಗುರುತು ಮೂಡಿಸಿದವರು.
ಇನ್ನು ಅಡ್ವಾಣಿ 91ನೇ ಜನ್ಮದಿನಕ್ಕೆ ಶುಭ ಹಾರೈಸಿರುವ ಪ್ರಧಾನಿ ಮೋದಿ, ರಾಷ್ಟ್ರ ನಿರ್ಮಾಣದಲ್ಲಿ ಎಲ್.ಕೆ. ಅಡ್ವಾಣಿ ಅವರ ಕೊಡುಗೆಯನ್ನು ಕೊಂಡಾಡಿದ್ದಾರೆ.
ಬಿಜೆಪಿಯ ಭೀಷ್ಮ ಎಂದೇ ಗುರುತಿಸಿಕೊಂಡ ಅಡ್ವಾಣಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವೆ ಮನೇಕ ಗಾಂಧಿ, ಕೇಂದ್ರ ಸಚಿವ ಅರುಣ್ ಜೇಟ್ಲಿ, ಅಶೋಕ್ ಗೆಹ್ಲಾಟ್ ಮತ್ತಿತರರು ಟ್ವೀಟರ್ ಮೂಲಕ ಶುಭ ಕೋರಿದ್ದಾರೆ.
ಆತಂಕದಲ್ಲಿರುವ ಪ್ರಜಾಪ್ರಭುತ್ವದ ರಕ್ಷಣೆಗೆ ನಿಮ್ಮ ಮಾರ್ಗದರ್ಶನ ಅಗತ್ಯ ಎಂದಿರುವ ಸಿದ್ದರಾಮಯ್ಯ, ಅಡ್ವಾಣಿ ಅವರ ಹಿರಿತನಕ್ಕೆ, ಅನುಭವಕ್ಕೆ ಸೂಕ್ತ ಗೌರವ ಸಿಗುತ್ತಿಲ್ಲ ಎಂಬ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
