ನವದೆಹಲಿ : ಮಂಗಳವಾರ ಬೆಳ್ಳಂಬೆಳಗ್ಗೆ ಬಿಜೆಪಿ ಮಾಜಿ ಶಾಸಕರೋರ್ವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. 

ಮಾಜಿ ಜಯಂತಿ ಭಾನುಶಾಲಿ ಅವರ ಹತ್ಯೆ ಮಾಡಲಾಗಿದೆ. 

ಅಹಮದಬಾದ್ ನಿಂದ ಭುಜ್ ಪ್ರದೇಶಕ್ಕೆ ರೈಲಿನಲ್ಲಿ ತೆರಳುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಗಳ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. 

2007ರಿಂದ 2012ರವರೆಗೆ ಅಬ್ದಾಸ ಕ್ಷೇತ್ರದಲ್ಲಿ  ಶಾಸಕರಾಗಿ ಭಾನುಶಾಲಿ ಕಾರ್ಯನಿರ್ವಹಿಸಿದ್ದರು. ಕಟಾರಿಯಾ ಹಾಗೂ ಸುರ್ಜಾಬರಿ ರೈಲ್ವೆ ಠಾಣೆಗಳ ನಡುವೆ ಈ ದುರ್ಘಟನೆ ನಡೆದಿದೆ.  ಕಣ್ಣು ಹಾಗೂ ಎದೆಯ ಭಾಗಕ್ಕೆ ಗುಂಡಿನ ದಾಳಿ ನಡೆಸಲಾಗಿದೆ. 

ಈ ಘಟನೆ ಬಳಿಕ ರೈಲ್ವೆ ಪೊಲೀಸರು ತಕ್ಷಣವೇ ಆಗಮಿಸಿ, ಪರಿಶೀಲನೆ ನಡೆಸಿದ್ದು, ದೂರು ದಾಖಲಿಸಿಕೊಳ್ಳಲಾಗಿದೆ.