ಮಾಜಿ ಸಚಿವ ಕಪಿಲ್ ಮಿಶ್ರಾ ಪತ್ರಿಕಾಗೋಷ್ಟಿ ವೇಳೆ ನಿಶ್ಯಕ್ತರಾಗಿ ಕುಸಿದು ಬಿದ್ದಿದ್ದಾರೆ. ಬುಧವಾರದಿಂದ ಉಪವಾಸ ಸತ್ಯಾಗ್ರಹ ಮಾಡಿದ ಪರಿಣಾಮವಾಗಿ ಪತ್ರಿಕಾಗೋಷ್ಟಿ ವೇಳೆ ಕುಸಿದು ಬಿದ್ದಿದ್ದು, ಕೂಡಲೇ ಆರ್'ಎಂಎಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

ನವದೆಹಲಿ (ಮೇ.14): ಮಾಜಿ ಸಚಿವ ಕಪಿಲ್ ಮಿಶ್ರಾ ಪತ್ರಿಕಾಗೋಷ್ಟಿ ವೇಳೆ ನಿಶ್ಯಕ್ತರಾಗಿ ಕುಸಿದು ಬಿದ್ದಿದ್ದಾರೆ. ಬುಧವಾರದಿಂದ ಉಪವಾಸ ಸತ್ಯಾಗ್ರಹ ಮಾಡಿದ ಪರಿಣಾಮವಾಗಿ ಪತ್ರಿಕಾಗೋಷ್ಟಿ ವೇಳೆ ಕುಸಿದು ಬಿದ್ದಿದ್ದು, ಕೂಡಲೇ ಆರ್ ಎಂಎಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

ನಿಶ್ಯಕ್ತಿ ಹಾಗೂ ನಿರ್ಜಲೀಕರಣದಿಂದ ಬಳಲುತ್ತಿದ್ದಾರೆ. ಉಳಿದಂತೆ ಯಾವುದೇ ಸಮಸ್ಯೆಯಿಲ್ಲವೆಂದು ಆರ್ ಎಂಎಲ್ ವೈದ್ಯರು ಹೇಳಿದ್ದಾರೆ.

ಅರವಿಂದ್ ಕೇಜ್ರಿವಾಲ್ ನ ಕೆಲ ಆಪ್ತರು ಸಾರ್ವಜನಿಕರಿಂದ ಪಡೆದ ದೇಣಿಗೆಯನ್ನು ಮುಚ್ಚಿಟ್ಟು ಚುನಾವಣಾ ಆಯೋಗಕ್ಕೆ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿ ಈ ಸಂಬಂಧ ದಾಖಲೆ ಸಮೇತ ಪತ್ರಿಕಾಗೋಷ್ಟಿ ಕರೆದಿದ್ದರು. ನನ್ನ ಬಳಿ ಆಪ್ ಮುಖಂಡರ ಬಹುಹಗರಣದ ದಾಖಲೆಗಳಿವೆ. ಕೇಜ್ರಿವಾಲನ್ನು ಅವರ ಕುರ್ಚಿಯಿಂದ ಕೆಳಗಿಳಿಸಿ ಜೈಲಿಗೆ ಕಳುಹಿಸುತ್ತೇನೆ ಎಂದು ಹೇಳಿದರು. ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಿರುವಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು.