ಕೋಶಿಶ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಉಗಾಂಡ ಮೂಲದ ವಿದ್ಯಾರ್ಥಿಗಳು ಈ ಕೃತ್ಯ ಎಸಗಿದ್ದಾರೆ. ಘಟನೆ ಬಳಿಕ ಮೂವರನ್ನ ವಶಕ್ಕೆ ಪಡೆದ ಸಂಪಿಗೆ ಹಳ್ಳಿ ಪೊಲೀಸರು ಜೈಲಿಗಟ್ಟಿದ್ಧಾರೆ.
ಬೆಂಗಳೂರು(ನ.06): ಬೆಂಗಳೂರಲ್ಲಿ ಮತ್ತೆ ವಿದೇಶಿ ಪ್ರಜೆಗಳು ಪುಂಡಾಟ ನಡೆಸಿದ್ಧಾರೆ. ಕುಡಿದು ಕಾರು ಚಲಾಯಿಸುತ್ತಿದ್ದ ಉಗಾಂಡ ಮೂಲದ ಪ್ರಜೆಗಳು ಹಾಲಿನ ವ್ಯಾಪಾರಕ್ಕೆಂದು ತೆರಳುತ್ತಿದ್ದ ವೇಲುಸ್ವಾಮಿ ಎಂಬುವವರಿಗೆ ಡಿಕ್ಕಿ ಹೊಡೆದಿದ್ದಾರೆ. 60 ವರ್ಷದ ವೇಲುಸ್ವಾಮಿ ಸ್ಥಳದಲ್ಲೇ ಅಸುನೀಗಿದ್ದಾರೆ. ಸಂಪಿಗೆಹಳ್ಳಿಯ ಹೆಗ್ಗಡೆನಗರದಲ್ಲಿ ಈ ಘಟನೆ ನಡೆದಿದೆ.
ಕೋಶಿಶ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಉಗಾಂಡ ಮೂಲದ ವಿದ್ಯಾರ್ಥಿಗಳು ಈ ಕೃತ್ಯ ಎಸಗಿದ್ದಾರೆ. ಘಟನೆ ಬಳಿಕ ಮೂವರನ್ನ ವಶಕ್ಕೆ ಪಡೆದ ಸಂಪಿಗೆ ಹಳ್ಳಿ ಪೊಲೀಸರು ಜೈಲಿಗಟ್ಟಿದ್ಧಾರೆ.