Asianet Suvarna News Asianet Suvarna News

ಲಕ್ಷಗುಂಡಿ ತೆಗೆದಿರೋದಾಗಿ ಲೆಕ್ಕ ತೋರಿಸಿ ಅವ್ಯವಹಾರ: ತನಿಖೆಗೆ ಆದೇಶ

ಅರಣ್ಯ ನೆಡುತೋಡು ಯೋಜನೆಯಡಿ ಗಿಡ ನೆಡಲು ಗುಂಡಿ ತೆಗೆಯುವ ಯೋಜನೆಯಲ್ಲಿ ಭಾರೀ ಗೋಲ್‌ಮಾಲ್ ನಡೆಸಿದ ಪ್ರಭಾರ ಡಿಎಂಫ್'ಗೆ ಇದೀಗ ಸಂಕಷ್ಟ ಶುರುವಾಗಿದೆ. ಸುವರ್ಣನ್ಯೂಸ್ ವರದಿಯಿಂದ ಎಚ್ಚೆತ್ತ ಸಾಗರ ತಾಲೂಕ್ ಪಂಚಾಯ್ತ್, ತನಿಖಾ ತಂಡ ರಚಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಮುಂದಾಗಿದೆ, ಇದು ಸುವರ್ಣನ್ಯೂಸ್ ಬಿಗ್ ಇಂಪ್ಯಾಕ್ಟ್

Forest Scam In SagaraForest Scam In Sagara
  • Facebook
  • Twitter
  • Whatsapp

ಶಿವಮೊಗ್ಗ(ಜೂ.25): ಅರಣ್ಯ ನೆಡುತೋಡು ಯೋಜನೆಯಡಿ ಗಿಡ ನೆಡಲು ಗುಂಡಿ ತೆಗೆಯುವ ಯೋಜನೆಯಲ್ಲಿ ಭಾರೀ ಗೋಲ್‌ಮಾಲ್ ನಡೆಸಿದ ಪ್ರಭಾರ ಡಿಎಂಫ್'ಗೆ ಇದೀಗ ಸಂಕಷ್ಟ ಶುರುವಾಗಿದೆ. ಸುವರ್ಣನ್ಯೂಸ್ ವರದಿಯಿಂದ ಎಚ್ಚೆತ್ತ ಸಾಗರ ತಾಲೂಕ್ ಪಂಚಾಯ್ತ್, ತನಿಖಾ ತಂಡ ರಚಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಮುಂದಾಗಿದೆ, ಇದು ಸುವರ್ಣನ್ಯೂಸ್ ಬಿಗ್ ಇಂಪ್ಯಾಕ್ಟ್

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪನವರ ಸ್ವಕ್ಷೇತ್ರದಲ್ಲಿ ಪ್ರಭಾರ ಡಿಎಫ್ ಓ ಗೋಲ್ ಮಾಲ್ ಮೋಹನ್ ಗಂಗೊಳ್ಳಿ ಭ್ರಷ್ಟಾಚಾರವನ್ನು ಸುವರ್ಣನ್ಯೂಸ್ ಬಯಲು ಮಾಡಿತು.ಅರಣ್ಯ ನಡುತೋಡು ಯೋಜನೆಯಡಿ ಗಿಡ ನೆಡಲು ಲಕ್ಷಾಂತರ ಗುಂಡಿ ತೆಗೆಯೋ ಲೆಕ್ಕಾಚಾರ ತೋರಿಸಿ ಕೋಟ್ಯಾಂತರ ರೂ. ಗುಳುಂ ಮಾಡಿದ ವಿಸ್ತೃತ ವರದಿ ಪ್ರಸಾರ ಮಾಡಿತ್ತು.

ವರದಿಯಿಂದ ಎಚ್ಚೆತ್ತ ಸಾಗರ ತಾಲೂಕ್ ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದೆ. ಹಿರೇಬಲಗುಂಜಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಿಗೆ ತೆರಳಿದ ತನಿಖಾ ತಂಡ ಪರಿಶೀಲನೆ ನಡೆಸಿತು. ನಿಯಮದ ಪ್ರಕಾರ 2 ಅಡಿ ಆಳ ಹಾಗೂ 2 ಅಡಿ ಅಗಲದ ಗುಂಡಿ ತೆಗೆದು, 7 ಅಡಿ ಎತ್ತರದ ಗಿಡ ನೆಡಬೇಕು. ಆದ್ರೆ ಕೇವಲ  8 ರಿಂದ 10 ಇಂಚು ಗುಂಡಿಗಳನ್ನು ತೆಗೆದು ಕೇವಲ 1.5 ಅಡಿ ಎತ್ತರದ ಗಿಡಗಳನ್ನು ನೆಟ್ಟು 11 ಕೋಟಿಗೂ ಅಧಿಕ ಅವ್ಯವಹಾರ ನಡೆಸಿರೋದು ಬಯಲಾಯ್ತು.

ಇನ್ನೂ ಸಾಗರ ಜನಪರ ವೇದಿಕೆಯವರು ಬೆಂಗಳೂರಿನ ಅರಣ್ಯ ಭವನದ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಅಲ್ಲದೇ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ , ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ದೂರು ನೀಡಿದ್ದಾರೆ.

ಒಟ್ಟಿನಲ್ಲಿ ಗಿಡಗಳಿಗಾಗಿ ಗುಂಡಿ ತೆಗೆಯುವ ಯೋಜನೆಯಲ್ಲಿ ಮೋಹನ್ ಸಂಗೊಳ್ಳಿ ಭ್ರಷ್ಟಚಾರ ನಡೆಸಿದ್ರು ಕಾಗೋಡು ತಿಮ್ಮಪ್ಪ ಮಾತ್ರ ಸುಮ್ಮನಿರೋದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. 

Follow Us:
Download App:
  • android
  • ios