ಬೋನಿನಿಂದ ಹೊರಗಿರುವ ಚಿರತೆಯನ್ನು ದೂರದಲ್ಲಿ ನೋಡಿದರೇ ಮೈಯೆಲ್ಲಾ ಬೆವರುತ್ತದೆ. ಅಂಥದ್ದರಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗಾಯಾಳು ಚಿರತೆಯೊಂದನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಪಶುಚಿಕಿತ್ಸಾಲಯಕ್ಕೆ ಕರೆದೊಯ್ದ ಅಚ್ಚರಿಯ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಗೋರಖ್ಪುರ: ಬೋನಿನಿಂದ ಹೊರಗಿರುವ ಚಿರತೆಯನ್ನು ದೂರದಲ್ಲಿ ನೋಡಿದರೇ ಮೈಯೆಲ್ಲಾ ಬೆವರುತ್ತದೆ. ಅಂಥದ್ದರಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗಾಯಾಳು ಚಿರತೆಯೊಂದನ್ನು ಬೈಕ್ನಲ್ಲಿ ಕೂರಿಸಿಕೊಂಡು ಪಶುಚಿಕಿತ್ಸಾಲಯಕ್ಕೆ ಕರೆದೊಯ್ದ ಅಚ್ಚರಿಯ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಕಳೆದ ಭಾನುವಾರ ಗೋರಖ್ಪುರ ಸಮೀಪದ ಪೋಥಾ ನುಲ್ಲಾ ಅರಣ್ಯದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಚಿರತೆಯೊಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಗಮನಕ್ಕೆ ಬಂದಿತ್ತು. ಈ ವೇಳೆ ಕಚೇರಿಗೆ ಕರೆ ಮಾಡಿದ್ದ ಸಿಬ್ಬಂದಿ ಬೋನ್ ತರುವಂತೆ ಹೇಳಿದ್ದರು.
ಆದರೆ ಬೋನ್ ತರುವುದು ವಿಳಂಬವಾದ ಕಾರಣ, ಚಿರತೆಗೆ ಪ್ರಾಣಹಾನಿ ಭೀತಿ ಎದುರಾಗಿತ್ತು. ಹೀಗಾಗಿ ಅರಣ್ಯ ಸಿಬ್ಬಂದಿ ಚಿರತೆಯನ್ನು ಬೈಕ್ ಮೇಲೆ ಹಾಕಿಕೊಂಡು ಸಮೀಪದ ಪಶು ಚಿಕಿತ್ಸಾಲಯಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.
