ಬೆಳಗಾವಿ [ಜು.2] :  ರಮೇಶ್ ಜಾರಕಿಹೊಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಅವರು ದೆಹಲಿಗೆ ಹೋಗಿದ್ದಾರೋ, ಎಲ್ಲಿಗೆ ಹೋಗಿದ್ದಾರೋ ಗೊತ್ತಿಲ್ಲ ಎಂದು ಸತೀಶ್  ಜಾರಕಿಹೊಳಿ ಹೇಳಿದ್ದಾರೆ. 

ರಮೇಶ್ ಅಧಿಕೃತವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ.  ಮೂರು ಜನ ಅಳಿಯಂದಿರಿಂದಾಗಿ  ರಾಜೀನಾಮೆ ಕೊಟ್ಟಿದ್ದಾರೆ ಎಂದು ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. 

ಲೋಕಸಭಾ ಚುನಾವಣೆಯನ್ನು ಉಪ ಚುನಾವಣೆ ಎಂದೇ ತೆಗೆದುಕೊಂಡಿದ್ದೆವು. ಅಂತಿಮ ಹಂತದ ವರೆಗೂ ತಯಾರಿ ನಡೆಸಿ ಲಖನ್ ಅವರನ್ನು ನಿಲ್ಲಿಸಬೇಕು ಎಂದುಕೊಂಡಿದ್ದೆವು. ಆದರೆ ಕೊನೆಯಲ್ಲಿ ಬದಲಾಗಿದ್ದು, ಗೋಕಾಕ್ ನಲ್ಲಿ ಲಖನ್ ಜಾರಕಿಹೊಳಿ ನೇತೃತ್ವದಲ್ಲಿ ಕಾಂಗ್ರೆಸ್ ಮುನ್ನಡೆಸಲಾಗುತ್ತದೆ ಎಂದರು. 

ಈಗಾಗಲೇ ಆನಂದ್ ಸಿಂಗ್ ರಾಜೀನಾಮೆ ಕೊಟ್ಟಿದ್ದು, ಶಾಸಕ ಮಹೇಶ್ ಕಮಟಳ್ಳಿ ಅವರು ರಮೇಶ್ ಜೊತೆಗೆ ಹೋಗುತ್ತಾರೆ. ಇನ್ನುಳಿದಂತೆ ಯಾವ ಶಾಸಕರೂ ಕೂಡ ಎಲ್ಲಿಯೂ ಹೋಗಿಲ್ಲ. ಎಲ್ಲರೂ ಇಲ್ಲಿಯೇ ಇದ್ದಾರೆ ಎಂದರು.