ಸೋಮವಾರ ಪೇಟೆ ಆನೆ ಕಾಡು ಮೀಸಲು ಅರಣ್ಯಕ್ಕೆ ಬಿದ್ದಿರುವ ಕಾಳ್ಗಿಚ್ಚು ಇನ್ನೂ ನಿಂತಿಲ್ಲ. ನಾಲ್ಕು ದಿನಗಳಿಂದಲೂ ‌ನಿಯಂತ್ರಣಕ್ಕೆ ಬಾರದ ಕಾಳ್ಗಿಚ್ಚು ಇಡೀ ಅರಣ್ಯವನ್ನು ವ್ಯಾಪಿಸುತ್ತಿದೆ.  

ಕೊಡಗು (ಮಾ.04): ಸೋಮವಾರ ಪೇಟೆ ಆನೆ ಕಾಡು ಮೀಸಲು ಅರಣ್ಯಕ್ಕೆ ಬಿದ್ದಿರುವ ಕಾಳ್ಗಿಚ್ಚು ಇನ್ನೂ ನಿಂತಿಲ್ಲ. ನಾಲ್ಕು ದಿನಗಳಿಂದಲೂ ‌ನಿಯಂತ್ರಣಕ್ಕೆ ಬಾರದ ಕಾಳ್ಗಿಚ್ಚು ಇಡೀ ಅರಣ್ಯವನ್ನು ವ್ಯಾಪಿಸುತ್ತಿದೆ.

ವಿಪರೀತ ಗಾಳಿ ಹಾಗೂ ಬಿಸಿಲಿನಿಂದ ಬೆಂಕಿ ವ್ಯಾಪಿಸುತ್ತಿದೆ. ಬೆಂಕಿ‌ ನಂದಿಸಲು ಸ್ಥಳೀಯರು ಪರದಾಡುತ್ತಿದ್ದಾರೆ. ಮನೆಯ‌‌ ಬಿಂದಿಗೆ ಬಕೇಟ್’ಗಳಿಂದ ನೀರು ತಂದು‌ ಬೆಂಕಿ ನಂದಿಸಲು‌ ಯತ್ನಿಸುತ್ತಿದ್ದಾರೆ. ಏನೇ ಮಾಡಿದರೂ ಬೆಂಕಿ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಕಿಡಿಗೇಡಿಗಳ ಈ ಕೃತ್ಯಕ್ಕೆ ನೂರಾರು ಎಕರೆ ಅರಣ್ಯ ಸಂಪತ್ತು ಹಾನಿಯಾಗುತ್ತಿದೆ.