ವಿಶ್ವ ಪ್ರಸಿದ್ಧ ಗೋಳಗುಮ್ಮಟ ನೋಡಲು ಆಗಮಿ ಸಿದ್ದ ಇಟಲಿ ದೇಶದ ಮೂವರು ಪ್ರಜೆಗಳು, ಸ್ಟೇಷನ್ ರಸ್ತೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೋಟು ವಿನಿಮಯಕ್ಕೆ ಆಗಮಿಸಿದ್ದರು.
ವಿಜಯಪುರ(ನ.11): ಕೇಂದ್ರ ಸರ್ಕಾರ ಬ್ಯಾನ್ ಮಾಡಿದ ನೋಟಿನ ಬಿಸಿ ವಿದೇಶಿಗರಿಗೂ ತಟ್ಟಿದೆ. ವಿಜಯಪುರ ಜಿಲ್ಲೆಗೆ ಆಗಮಿಸಿದ್ದ ಇಟಲಿ ದೇಶದ ಪ್ರಜೆಗಳು ಕೂಡ 100 ಹಾಗೂ 50 ರೂ ಮುಖ ಬೆಲೆ ನೋಟುಗಳಿಲ್ಲದೇ ಒಪ್ಪತ್ತು ಕೂಳಿಗೂ ಪರದಾಡಿದ್ದಾರೆ. ವಿಶ್ವ ಪ್ರಸಿದ್ಧ ಗೋಳಗುಮ್ಮಟ ನೋಡಲು ಆಗಮಿ ಸಿದ್ದ ಇಟಲಿ ದೇಶದ ಮೂವರು ಪ್ರಜೆಗಳು, ಸ್ಟೇಷನ್ ರಸ್ತೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೋಟು ವಿನಿಮಯಕ್ಕೆ ಆಗಮಿಸಿದ್ದರು. ಆದರೆ ಚಿಲ್ಲರೆ ಸಿಗದೆ ಹೈರಾಣಾದ ಇಟಲಿ ಮಹಿಳೆಯರಿಗೆ ಸ್ಥಳೀಯರ ಸಹಾಯದಿಂದ ಕೊನೆಗೂ 4000 ರೂಪಾಯಿ ವಿನಿಮಯ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು. 500-1000 ಮುಖ ಬೆಲೆ ಹಳೆ ನೋಟನ್ನು ಪಡೆದ ಬ್ಯಾಂ ಕ್ ವ್ಯವಸ್ಥಾಪಕರು 20 ರೂ. ಮುಖ ಬೆಲೆ ನೋಟಿನ ಬಂಡಲ್ ನೀಡಿದರು. ಬದುಕಿದೆಯಾ ಬಡ ಜೀವವೇ ಎಂದು ನೇರವಾಗಿ ಹೊಟೇಲ್'ಗೆ ಹೋಗಿ ಭೋಜನ ಸವಿದು ನಿಟ್ಟುಸಿರು ಬಿಟ್ಟರು.
