Asianet Suvarna News Asianet Suvarna News

ಮೋದಿ ವಿದೇಶಾಂಗ ನೀತಿ ಶಿಲ್ಪಿ ಜೈಶಂಕರ್ ನಿವೃತ್ತಿ

ನರೇಂದ್ರ ಮೋದಿ ಸರ್ಕಾರದ ಆಕ್ರಮಣಕಾರಿ ವಿದೇಶಾಂಗ ನೀತಿ ರೂಪಿಸಿದ್ದ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಭಾನುವಾರ ನಿವೃತ್ತಿ ಹೊಂದಿದರು. 1977ನೇ ಬ್ಯಾಚಿನ ಐಎಫ್‌ಎಸ್ ಅಧಿಕಾರಿಯಾದ ಜೈಶಂಕರ್ ಸೋವಿಯತ್ ಒಕ್ಕೂಟದಲ್ಲಿ 1979 ರಿಂದ 1981 ರ ವರೆಗೆ ರಾಯಭಾರ ಕಚೇರಿ ಅಧಿಕಾರಿಯಾಗಿ ವೃತ್ತಿ ಆರಂಭಿಸಿದ್ದರು.

Foreign Secretary S Jaishankar Architect of PM Modis Foreign policy Retires

ನವದೆಹಲಿ: ನರೇಂದ್ರ ಮೋದಿ ಸರ್ಕಾರದ ಆಕ್ರಮಣಕಾರಿ ವಿದೇಶಾಂಗ ನೀತಿ ರೂಪಿಸಿದ್ದ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಭಾನುವಾರ ನಿವೃತ್ತಿ ಹೊಂದಿದರು. 1977ನೇ ಬ್ಯಾಚಿನ ಐಎಫ್‌ಎಸ್ ಅಧಿಕಾರಿಯಾದ ಜೈಶಂಕರ್ ಸೋವಿಯತ್ ಒಕ್ಕೂಟದಲ್ಲಿ 1979 ರಿಂದ 1981 ರ ವರೆಗೆ ರಾಯಭಾರ ಕಚೇರಿ ಅಧಿಕಾರಿಯಾಗಿ ವೃತ್ತಿ ಆರಂಭಿಸಿದ್ದರು.

2014ರ ಸೆಪ್ಟೆಂಬರ್ ನಲ್ಲಿ ನ್ಯೂಯಾರ್ಕ್‌ನ ಮ್ಯಾಡಿಸನ್ ಸ್ಕ್ವೇರ್‌ನಲ್ಲಿ ಮೋದಿ ಭಾಷಣಕ್ಕೆ ವೇದಿಕೆ ಕಲ್ಪಿಸಿದ್ದರ ಹಿಂದೆ ಜೈಶಂಕರ್ ಪಾತ್ರ ಮಹತ್ವದಾಗಿತ್ತು. ಆ ಸಂದರ್ಭದಲ್ಲಿ ಅವರು ಅಮೆರಿಕಕ್ಕೆ ಭಾರತದ ರಾಯಭಾರಿಯಾಗಿದ್ದರು. ಬಳಿಕ 2015 ಜ.29ರಂದು ಭಾರತದ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕ ಗೊಂಡಿದ್ದರು.

ಇತ್ತೀಚೆಗೆ ಭಾರತ, ಚೀನಾ ನಡುವೆ ಸೃಷ್ಟಿಯಾಗಿದ್ದ ಡೋಕ್ಲಾಂ ಬಿಕ್ಕಟ್ಟನ್ನು ಮಾತುಕತೆಯ ಮೂಲಕ ಯಶಸ್ವಿಯಾಗಿ ಬಗೆಹರಿಸಿದ್ದರು. ಭಾರತ ಮತ್ತು ಇಸ್ರೇಲ್ ಸಂಬಂಧ ಬಲ ವರ್ಧನೆಯಲ್ಲಿ ಜೈಶಂಕರ್ ರಾಜತಾಂತ್ರಿಕ ಶ್ರಮ ಅಡಗಿದೆ. ತೆರವಾದ ಸ್ಥಾನಕ್ಕೆ ವಿಜಯ್ ಕೇಶವ್ ಗೋಖಲೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

Follow Us:
Download App:
  • android
  • ios