ಸುಂದರ ತಾಣವಾಗಿದ್ದ ಬಹಮಾಸ್ ಬೀಚ್ ಒಳ್ಳೆಯ ಪ್ರವಾಸಿ ತಾಣವಾಗಿದ್ದು, ಇರ್ಮಾ ಅಬ್ಬರಕ್ಕೆ ಇದೀಗ ಬೀಚ್'​ನಲ್ಲಿದ್ದ ನೀರೇ ಖಾಲಿಯಾಗಿದೆ..!

ಫ್ಲೋರಿಡಾ(ಸೆ.11): ಅಮೆರಿಕಾಗೆ ಮಾರಕ ಇರ್ಮಾ ಚಂಡಮಾರುತ ದೊಡ್ಡ ಪೆಟ್ಟನ್ನೇ ಕೊಟ್ಟಿದ್ದು, ಸುಮಾರು 250 ಕಿಮೀ ವೇಗದಲ್ಲಿ ಬೀಸುತ್ತಿರೋ ಭಾರೀ ಚಂಡಮಾರುತದಿಂದಾಗಿ ಇದುವರೆಗೂ ಸುಮಾರು 35ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಭಾರೀ ಗಾಳಿಗೆ ಜನ, ವಾಹನಗಳು ಸೇರಿದಂತೆ ಸಿಕ್ಕ ಸಿಕ್ಕ ವಸ್ತುಗಳೆಲ್ಲಾ ಹಾರಿಹೋಗಿವೆ. ಅಷ್ಟೇ ಅಲ್ಲ ಫ್ಲೋರಿಡಾದಲ್ಲಿನ ಬಹಮಾಸ್ ಎಂಬ ಬೀಚ್ ಕೂಡಾ ಚಂಡಮಾರುತ ಹೊಡೆತಕ್ಕೆ ನಾಪತ್ತೆಯಗಿದೆ.

ಸುಂದರ ತಾಣವಾಗಿದ್ದ ಬಹಮಾಸ್ ಬೀಚ್ ಒಳ್ಳೆಯ ಪ್ರವಾಸಿ ತಾಣವಾಗಿದ್ದು, ಇರ್ಮಾ ಅಬ್ಬರಕ್ಕೆ ಇದೀಗ ಬೀಚ್'​ನಲ್ಲಿದ್ದ ನೀರೇ ಖಾಲಿಯಾಗಿದೆ..!

Scroll to load tweet…

ಇಲ್ಲಿನ ಜನ ಬಹಮಾಸ್ ಬೀಚ್ ಎಲ್ಲಿ ಹೋಯ್ತಪ್ಪಾ ಎಂದು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಒಂದು ಘಟನೆ ಇರ್ಮಾ ಚಂಡಮಾರುತದ ಕರಾಳ ಮುಖವನ್ನು ತೋರಿಸುತ್ತಿದೆ.