ಎರಡು ದಿನಗಳ ಕಾಲ ವಾರಣಾಸಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಜನತೆಯನ್ನುದ್ದೇಶಿಸಿ ಮಾತನಾಡುತ್ತಾ, ಬಿಜೆಪಿಗೆ ವೋಟ್’ಬ್ಯಾಂಕ್ ಪಾಲಿಟಿಕ್ಸ್’ನಲ್ಲಿ ನಂಬಿಕೆ ಇಲ್ಲ. ದೇಶದ ಅಭಿವೃದ್ದಿಯೇ ಪಕ್ಷದ ಏಕಮೇವ ಉದ್ದೇಶವಾಗಿದೆ ಎಂದು ಮೋದಿ ಹೇಳಿದ್ದಾರೆ.
ನವದೆಹಲಿ (ಸೆ.23): ಎರಡು ದಿನಗಳ ಕಾಲ ವಾರಣಾಸಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಜನತೆಯನ್ನುದ್ದೇಶಿಸಿ ಮಾತನಾಡುತ್ತಾ, ಬಿಜೆಪಿಗೆ ವೋಟ್’ಬ್ಯಾಂಕ್ ಪಾಲಿಟಿಕ್ಸ್’ನಲ್ಲಿ ನಂಬಿಕೆ ಇಲ್ಲ. ದೇಶದ ಅಭಿವೃದ್ದಿಯೇ ಪಕ್ಷದ ಏಕಮೇವ ಉದ್ದೇಶವಾಗಿದೆ ಎಂದು ಮೋದಿ ಹೇಳಿದ್ದಾರೆ.
ನಮಗೆ ಆಡಳಿತ ಚುನಾವಣೆಯಲ್ಲಿ ಗೆಲ್ಲಲು, ವೋಟ್’ಬ್ಯಾಂಕ್ ರಾಜಕೀಯ ಮಾಡುವುದಕ್ಕಲ್ಲ. ದೇಶಗ ಸರ್ವತೋಮುಖ ಅಭಿವೃದ್ದಿಯೇ ನಮ್ಮ ಮೊದಲ ಆದ್ಯತೆ. ಪಕ್ಷಕ್ಕಿಂತ ದೇಶ ದೊಡ್ಡದು ಎಂದು ಮೋದಿ ಹೇಳಿದ್ದಾರೆ.
ವಾರಣಾಸಿಯಲ್ಲಿ ಸ್ವಚ್ಚ ಭಾರತ ಅಭಿಯಾನವನ್ನು ಹಮ್ಮಿಕೊಂಡಿದ್ದು, ಸ್ವಚ್ಚತೆ ಎನ್ನುವುದು ಸ್ವಭಾತಃ ಬರುವಂತದ್ದು. ಸ್ವಚ್ಚ ಭಾರತದಿಂದ ಆರೋಗ್ಯಯುತ ಭಾರತ ನಿರ್ಮಾಣವಾಗಲಿದೆ ಎಂದು ಮೋದಿ ಹೇಳಿದರು.
ಶಹನ್ಪುರ ಹಳ್ಳಿಯಲ್ಲಿಂದು ಪ್ರಾಣಿಗಳ ಆರೋಗ್ಯ ಕೇಂದ್ರವಾದ ಪಶುಧಾನ್ ಆರೋಗ್ಯ ಮೇಳವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್;ರನ್ನು ಶ್ಲಾಘಿಸಿದರು.
