ಇದೇವೇಳೆ ವಿಪಕ್ಷಗಳಾದ ಎಡರಂಗ, ಕಾಂಗ್ರೆಸ್ ಮತ್ತು ನಿತೀಶ್ ಕುಮಾರ್ ಅವರ ಜೆಡಿಯುದ ಒಮ್ಮತದ ಅಭ್ಯರ್ಥಿಯಾಗಿ ಶರತ್ ಪವಾರ್ ಆಯ್ಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ನವದೆಹಲಿ(ಏ.25): ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ಇನ್ನೂ ಅಭ್ಯರ್ಥಿಯ ಹುಡುಕಾಟದಲ್ಲಿರುವಾಗಲೇ, ಎನ್'ಡಿಎ ಮೈತ್ರಿ ಪಕ್ಷ ಶಿವಸೇನೆ ಎನ್'ಸಿಪಿ ಮುಖ್ಯಸ್ಥ ಶರದ್ ಪವಾರ್ ಹೆಸರನ್ನು ಶಿಫಾರಸು ಮಾಡಿದೆ.
ಇದರ ಜತೆಗೆ ಬಿಜೆಪಿ ಕೂಡಾ ಶರದ್ ಪವಾರ್ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದೆ.
ಶಿವಸೇನೆಯು ರಾಷ್ಟ್ರಪತಿ ಆಯ್ಕೆಗೆ ಮೊದಲು ಶಿಫಾರಸು ಮಾಡಿದ್ದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೆಸರನ್ನು. ಆದರೆ ಮೋಹನ್ ಭಾಗವತ್ ಅವರು ನಾನು ರಾಷ್ಟ್ರಪತಿ ಹುದ್ದೆಯ ರೇಸ್'ನಲ್ಲಿಲ್ಲ ಎಂದು ಸ್ಪಷ್ಟಪಡಿಸಿದ ಬಳಿಕ ಶರದ್ ಪವಾರ್ ಹೆಸರು ಶಿಫಾರಸು ಮಾಡಿದೆ.
ಇದೇವೇಳೆ ವಿಪಕ್ಷಗಳಾದ ಎಡರಂಗ, ಕಾಂಗ್ರೆಸ್ ಮತ್ತು ನಿತೀಶ್ ಕುಮಾರ್ ಅವರ ಜೆಡಿಯುದ ಒಮ್ಮತದ ಅಭ್ಯರ್ಥಿಯಾಗಿ ಶರತ್ ಪವಾರ್ ಆಯ್ಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಒಂದುವೇಳೆ ಶರದ್ ಪವಾರ್ ಒಮ್ಮತದ ಅಭ್ಯರ್ಥಿಯಾಗಿ ಹೊರಹೊಮ್ಮಿದರೆ, ಉದ್ಧವ್ ಠಾಕ್ರೆ ಅವರು ಮಾತುಕತೆಗೆ ಮುಂದಾಗಬಹುದು ಎಂದು ಶಿವಸೇನಾ ವಕ್ತಾರ ರಾವುತ್ ತಿಳಿಸಿದ್ದಾರೆ.