"ದೇಶ್ ಕೊ ನೇತಾ ನಹೀ ನೀತಿ ಚಾಹಿಯೆ" (ದೇಶಕ್ಕೆ ನಾಯಕ ಬೇಡ, ನೀತಿ ಬೇಕು) ಎಂದು ಮೂಡುಬಿದಿರೆಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಸೀತಾರಾಮ ಯಚೂರಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ  ನಡೆಸಿದ್ದಾರೆ. 

ಮೂಡಬಿದ್ರೆ (ಜ.02): "ದೇಶ್ ಕೊ ನೇತಾ ನಹೀ ನೀತಿ ಚಾಹಿಯೆ" (ದೇಶಕ್ಕೆ ನಾಯಕ ಬೇಡ, ನೀತಿ ಬೇಕು) ಎಂದು ಮೂಡುಬಿದಿರೆಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಸೀತಾರಾಮ ಯಚೂರಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಭ್ರಷ್ಟಾಚಾರ ರಹಿತ ಸರ್ಕಾರ ನಿರ್ಮಾಣ ಮಾಡುತ್ತೇವೆ ಎಂದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧಿಕಾರವಿರುವ ರಾಜ್ಯಗಳ ಯಾವುದೇ ಭ್ರಷ್ಟಾಚಾರ ಅವ್ಯವಹಾರವನ್ನು ತನಿಖೆ ಮಾಡಿಲ್ಲ. ನಿಜವಾದ ಅರ್ಥದಲ್ಲಿ ಇವರೇ ದೇಶದ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ ಯಚೂರಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಎಸ್'ಬಿಐ ಇಂತಿಷ್ಟು ಹಣ ಇಡಲೇಬೇಕು ಎಂದು 1700 ಕೋಟಿ ರೂ ಜನರ ಹಣವನ್ನು ಇಟ್ಟುಕೊಂಡಿದೆ. ಆದರೆ 11 ಲಕ್ಷ ಕೋಟಿ ವಸೂಲು ಮಾಡಲಾಗದ ಸಾಲವನ್ನು ಬಂಡವಾಳಶಾಹಿ ಕಂಪನಿಗಳಿಗೆ ನೀಡಲಾಗಿದೆ. ಅದರ ಅರ್ಧ ಹಣ ದೇಶದ ಅಭಿವೃದ್ಧಿಗೆ ಸಾಕು. ಮೋದಿ, ಷಾ ತಾವು ಸೋಲಿಸಲಾಗದ ಅಶ್ವಮೇಧ ಮಾಡುತ್ತಿದ್ದೇವೆ ಅಂದುಕೊಂಡಿದ್ದಾರೆ. ಅಂದು ರಾಮನ ಅಶ್ವಮೇಧವನ್ನು ಅವನದೇ ಅವಳಿ ಮಕ್ಕಳು ತಡೆದಿದ್ದರು. ಈಗ ಇವರು ಅಂದುಕೊಂಡಿರೋ ಅಶ್ವಮೇಧವನ್ನು ಅವಳಿ ಶಕ್ತಿಗಳಾದ ರೈತರು, ಕಾರ್ಮಿಕರು ತಡಿದೇ ತಡೆಯುತ್ತಾರೆ ಎಂದು ಸೀತಾರಾಮ್ ಯೆಚೂರಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಾರೆ.