ವಿವಿಪ್ಯಾಟ್ ಅಂದರೆ, ಇವಿಎಂನಲ್ಲಿ ಗುಂಡಿ ಒತ್ತಿ ಮತ ಚಲಾಯಿಸುತ್ತಿದ್ದಂತೆ ಅದಕ್ಕೆ ಅಳವಡಿಸಿದ ಚಿಕ್ಕ ಪ್ರಿಂಟರ್‌ನಲ್ಲಿ ಮತದಾರನ ಸಂಖ್ಯೆ, ಮತದಾನ ಮಾಡಿದ ಚಿಹ್ನೆ ಮತ್ತಿತರ ಮಾಹಿತಿ ಒಳಗೊಂಡ ಚಿಕ್ಕ ಚೀಟಿ ಬರುತ್ತದೆ.

ರಾಜಕೀಯ ಪಕ್ಷಗಳು, ಹೋರಾಟಗಾರರು, ತಜ್ಞರ ಒತ್ತಾಯಕ್ಕೆ ಮಣಿದು ಚುನಾವಣಾ ಆಯೋಗವು ಇಎಂಗಳಿಗೆ ಇನ್ನಷ್ಟು ಸುರಕ್ಷತಾ ಕ್ರಮಗಳನ್ನು ಅಳವಡಿಸಿದೆ. ಅದರ ಭಾಗವಾಗಿ ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್ (ವಿವಿಪ್ಯಾಟ್) ಜಾರಿಗೆ ಬಂದಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ದೇಶಾದ್ಯಂತ ಈ ಪದ್ಧತಿ ಜಾರಿಯಾಗಲಿದೆ. ವಿವಿಪ್ಯಾಟ್ ಅಂದರೆ, ಇವಿಎಂನಲ್ಲಿ ಗುಂಡಿ ಒತ್ತಿ ಮತ ಚಲಾಯಿಸುತ್ತಿದ್ದಂತೆ ಅದಕ್ಕೆ ಅಳವಡಿಸಿದ ಚಿಕ್ಕ ಪ್ರಿಂಟರ್‌ನಲ್ಲಿ ಮತದಾರನ ಸಂಖ್ಯೆ, ಮತದಾನ ಮಾಡಿದ ಚಿಹ್ನೆ ಮತ್ತಿತರ ಮಾಹಿತಿ ಒಳಗೊಂಡ ಚಿಕ್ಕ ಚೀಟಿ ಬರುತ್ತದೆ. ಅದನ್ನು ನೋಡಿ ಮತದಾರ ತನ್ನ ಮತ ಸರಿಯಾಗಿ ದಾಖಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು. ಚುನಾವಣೆ ಮತ ಎಣಿಕೆಯ ಬಗ್ಗೆ ಅನುಮಾನ ವ್ಯಕ್ತವಾದಲ್ಲಿ ಇವಿಎಂ ಮತಗಳಿಗೂ, ಮತಪೆಟ್ಟಿಗೆಯಲ್ಲಿನ ಚೀಟಿಗಳ ಮಾಹಿತಿಗೂ ತಾಳೆ ನೋಡಿ ಫಲಿತಾಂಶ ನಿಖರಗೊಳಿಸಬಹುದು.

(ಕೀರ್ತಿ ತೀರ್ಥಹಳ್ಳಿ ಅವರ ಲೇಖನದ ಆಯ್ದ ಭಾಗ- ಕನ್ನಡಪ್ರಭ)