ಗಾಂಧಿ ಜಯಂತಿ: 150 ಕಿ.ಮೀ. ಪಾದಯಾತ್ರೆ ನಡೆಸುವಂತೆ ಮೋದಿ ಕರೆ

ಇದೇ ಅಕ್ಟೋಬರ್ 2ರಂದು ಮಹಾತ್ಮಾ ಗಾಂಧಿ 150ನೇ ಜನ್ಮ ಜಯಂತಿ| ರಾಷ್ಟ್ರಪಿತನ ಜನ್ಮ ಜಯಂತಿ ಆಚರಿಸಲು ಕೇಂದ್ರ ಸರ್ವ ಸನ್ನದ್ಧ| 150 ಕಿ.ಮೀ ಪಾದಯಾತ್ರೆ ನಡೆಸುವಂತೆ ಬಿಜೆಪಿ ಸಂಸದರಿಗೆ ಪ್ರಧಾನಿ ಕರೆ| ಸ್ವಕ್ಷೇತ್ರದಲ್ಲಿ 150 ಪಾದಯಾತ್ರೆ ಹಮ್ಮಿಕೊಳ್ಳುವಂತೆ ಮೋದಿ ಆದೇಶ| ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಮಾಹಿತಿ|

For 150th Gandhi Jayanti PM Asks BJP Lawmakers To Take 150-km Foot-March

ನವದೆಹಲಿ(ಜು.09): ಮಹಾತ್ಮಾ ಗಾಂಧಿಯವರ 150ನೇ ಜಯಂತಿ ಆಚರಣೆ ವೇಳೆ ಎಲ್ಲಾ ಬಿಜೆಪಿ ಸಂಸದರೂ ತಮ್ಮ ತಮ್ಮ ಕ್ಷೇತ್ರದಲ್ಲಿ 150 ಕಿ.ಮೀ ಪಾದಯಾತ್ರೆ ಮಾಡಬೇಕೆಂದು ಪ್ರಧಾನಿ ಮೋದಿ ಸೂಚಿಸಿದ್ದಾರೆ.

ಇಂದು ದೆಹಲಿಯಲ್ಲಿ ಬಿಜೆಪಿ ಸಂಸದರೊಂದಿಗಿನ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಅಕ್ಟೋಬರ್ 2ರಿಂದ ಅಕ್ಟೋಬರ್ 31ರ ನಡುವೆ ಬಿಜೆಪಿ ಸಂಸದರು ಪ್ರತಿದಿನ 15 ಕಿ.ಮೀ ನಂತೆ ಒಟ್ಟು 150 ಕಿ.ಮೀ. ಪಾದಯಾತ್ರೆ ನಡೆಸುವ ಮೂಲಕ ಮಹಾತ್ಮಾ ಗಾಂಧಿ ಮತ್ತು ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಜನ್ಮ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂದು ಕರೆ ನೀಡಿದರು.

ಈ ಕುರಿತು ಮಾಹಿತಿ ನೀಡಿರುವ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ರಾಜ್ಯಸಭಾ ಸದಸ್ಯರು ಕೂಡ ಪಾದಯಾತ್ರೆಯಲ್ಲಿ ಭಾಗವಹಿಸಿ ಬಿಜೆಪಿ ಸಂಘಟನಾತ್ಮಕವಾಗಿ ದುರ್ಬಲವಾಗಿರುವ ಕ್ಷೇತ್ರಗಳಲ್ಲಿ ಸಂಚರಿಸಬೇಕೆಂದು ಪ್ರಧಾನಿ ಮನವಿ ಮಾಡಿದ್ದಾರೆ ಎಂದು ತಿಳಿಸಿದರು.

Latest Videos
Follow Us:
Download App:
  • android
  • ios