ವಿವಿಧ ರೀತಿಯ ಯೋಗ ಮಾದರಿಗಳನ್ನು ಅಳವಡಿಸಿಕೊಂಡಿರುವ ಅಕ್ಷರ ಯೋಗ ಕೇಂದ್ರವು ನೂತನವಾಗಿ ಫ್ಲೈಯಿಂಗ್ ಬರ್ಡ್ ಎಂಬ ನೂತನ ಯೋಗ ವಿಧಾನವನ್ನು ಪರಿಚಯಿಸುತ್ತಿದೆ.

ಬೆಂಗಳೂರು(ಜು.19): ವಿವಿಧ ರೀತಿಯ ಯೋಗ ಮಾದರಿಗಳನ್ನು ಅಳವಡಿಸಿಕೊಂಡಿರುವ ಅಕ್ಷರ ಯೋಗ ಕೇಂದ್ರವು ನೂತನವಾಗಿ ಫ್ಲೈಯಿಂಗ್ ಬರ್ಡ್ ಎಂಬ ನೂತನ ಯೋಗ ವಿಧಾನವನ್ನು ಪರಿಚಯಿಸುತ್ತಿದೆ.

ಸದಾಶಿವನಗರದಲ್ಲಿರುವ ಅಕ್ಷರ ಯೋಗ ಕೇಂದ್ರದಲ್ಲಿ ಮಂಗಳವಾರ ಗಾಳಿಯಲ್ಲಿ ತೇಲುವ ಫ್ಲೈಯಿಂಗ್ ಬರ್ಡ್ ಯೋಗ ಅನಾವರಣಗೊಳಿಸಿತು. ನಟ ಪುನೀತ್ ರಾಜಕುಮಾರ್ ಚಾಲನೆ ನೀಡಿದರು. ನಂತರ ಮಾತನಾಡಿದ ಪುನೀತ್, ಯೋಗವು ಮಾನಸಿಕ ಶಾಂತಿ, ನೆಮ್ಮದಿ ಹಾಗೂ ದೇಹದ ಸದೃಢತೆಗೆ ನೆರವಾಗುತ್ತದೆ. ಫ್ಲೈಯಿಂಗ್ ಬರ್ಡ್ ಯೋಗ ವಿನೂತನ ಯೋಗವಾಗಿದ್ದು, ವಿಭಿನ್ನ ಅನುಭವ ನೀಡಲಿದೆ. ಸ್ನಾಯು ಸದೃಢ ಬೆಳವಣಿಗೆಗೆ ಸಹಕಾರಿಯಾಗಲಿದೆ. ಯೋಗಕ್ಕೆ ನಮ್ಮ ತಂದೆ ರಾಜಕುಮಾರ್ ಸಾಕಷ್ಟು ಪ್ರಾಮುಖ್ಯತೆ ನೀಡಿದ್ದರು. ಇತ್ತೀಚೆಗಷ್ಟೇ ನಾನು ಸಹ ಯೋಗ ಅಳವಡಿಸಿಕೊಂಡಿದ್ದೇನೆ ಎಂದರು.