ಎಲೆಕ್ಷನ್'ಗೂ ಮುನ್ನ ಜೆಡಿಎಸ್ ಮುಖಂಡ ವಿ.ಕೆ.ಗೋಪಾಲ್ ಬರ್ತ್‌ಡೇ ಪಾರ್ಟಿಯಲ್ಲಿ ಅಭಿಮಾನಿಗಳಿಂದ ಪುಷ್ಪಾರ್ಚನೆ ಮಾಡಿಸಿಕೊಂಡಿದ್ದಾರೆ. ಪುಷ್ಪಾರ್ಚನೆ ಮಾಡಿಸಿಕೊಂಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಬೆಂಗಳೂರು(ಆ.31): ಎಲೆಕ್ಷನ್'ಗೂ ಮುನ್ನ ಜೆಡಿಎಸ್ ಮುಖಂಡ ವಿ.ಕೆ.ಗೋಪಾಲ್ ಬರ್ತ್‌ಡೇ ಪಾರ್ಟಿಯಲ್ಲಿ ಅಭಿಮಾನಿಗಳಿಂದ ಪುಷ್ಪಾರ್ಚನೆ ಮಾಡಿಸಿಕೊಂಡಿದ್ದಾರೆ. ಪುಷ್ಪಾರ್ಚನೆ ಮಾಡಿಸಿಕೊಂಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಜೆಡಿಎಸ್ ಘಟಕ ಅಧ್ಯಕ್ಷ ವಿ.ಕೆ.ಗೋಪಾಲ್ ಸಿಂಹಾಸನದ ಮೇಲೆ ಕೂತು, ಕಿರೀಟ ಧರಿಸಿ ಪುಷ್ಪಾರ್ಚನೆ ಮಾಡಿಸಿಕೊಂಡಿದ್ದಾರೆ. ಕತ್ರಿಗುಪ್ಪೆಯಲ್ಲಿ ಸಮಾವೇಶ ನಡೆದಿದ್ದು ಸಮಾವೇಶದಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೆಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಸಹ ಭಾಗವಹಿಸಿದ್ದರು.
ಪದ್ಮನಾಭನಗರ ಕ್ಷೇತ್ರದ ಜೆಡಿಎಸ್ ಸಂಭವನೀಯ ಅಭ್ಯರ್ಥಿಯಾಗಿರುವ ಗೋಪಾಲ್ರಿಗೆ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಅದ್ಧೂರಿ ಸನ್ಮಾನ ಮಾಡಲಾಯ್ತು. ಅಭಿಮಾನಿಗಳಿಂದ ಪುಷ್ಪಾರ್ಚನೆ ಮಾಡಿಸಿಕೊಂಡಿರುವುದು ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಅಲ್ಲದೆ, ಜೆಡಿಎಸ್ ನಾಯಕನ ವಿಲಾಸಿ ವೈಭೋಗಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.
