ಪರೀಕ್ಷೆಯಲ್ಲಿ ರ್ಯಾಂಕ್ ಪಡೆಯುವ ಮಕ್ಕಳನ್ನು ಪೋಷಕರು ಗಿಫ್ಟ್ ಕೊಟ್ಟು ಸಂತುಷ್ಟ ಪಡಿಸುತ್ತಾರೆ. ಆದರೆ, ತಮಿಳುನಾಡಿನಲ್ಲಿ ಶಿಕ್ಷಕಿಯೊಬ್ಬರು ಮಕ್ಕಳು ಹೆಚ್ಚು ಅಂಕ ಪಡೆಯುವುದನ್ನು ಉತ್ತೇಜಿಸಲು ವಿಮಾನ ಪ್ರಯಾಣದ ಆಫರ್ ನೀಡಿದ್ದಾರೆ.

ಚೆನ್ನೈ(ಅ.31): ಪರೀಕ್ಷೆಯಲ್ಲಿ ರ್ಯಾಂಕ್ ಪಡೆಯುವ ಮಕ್ಕಳನ್ನು ಪೋಷಕರು ಗಿಫ್ಟ್ ಕೊಟ್ಟು ಸಂತುಷ್ಟ ಪಡಿಸುತ್ತಾರೆ. ಆದರೆ, ತಮಿಳುನಾಡಿನಲ್ಲಿ ಶಿಕ್ಷಕಿಯೊಬ್ಬರು ಮಕ್ಕಳು ಹೆಚ್ಚು ಅಂಕ ಪಡೆಯುವುದನ್ನು ಉತ್ತೇಜಿಸಲು ವಿಮಾನ ಪ್ರಯಾಣದ ಆಫರ್ ನೀಡಿದ್ದಾರೆ.
ಪೆರುಂತಲೈವರ್ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಸಮಾಜ ವಿಜ್ಞಾನ ಶಿಕ್ಷಕಿ ಸೆಲ್ವ ಕುಮಾರಿ ಎನ್ನುವವರು ೧೦ನೇ ತರಗತಿಯಲ್ಲಿ ೧೦೦ಕ್ಕೆ ನೂರು ಅಂಕ ಪಡೆಯುವ ಬಾಲಕಿ ಯರಿಗೆ ವಿಮಾನದಲ್ಲಿ ಕರೆದೊಯ್ಯುವುದಾಗಿ ‘ರವಸೆ ನೀಡಿದ್ದರು. ಹೀಗಾಗಿ ಪರೀಕ್ಷೆಯಲ್ಲಿ ೧೦೦ ಅಂಕ ಪಡೆದ ಸರನ್ಯಾ ಮತ್ತು ಯಮುನಾ ಎಂಬ ಇಬ್ಬರು ಬಾಲಕಿ ಯರು ಮೊದಲ ಬಾರಿ ವಿಮಾನ ಹತ್ತಿ ಸಂತಸಪಟ್ಟಿದ್ದಾರೆ. ಇದಕ್ಕಾಗಿ ಶಿಕ್ಷಕಿ ೭,೦೦೦ ರು. ಖರ್ಚು ಮಾಡಿದ್ದಾರೆ.