ಮೈಸೂರು: ಕೇಂದ್ರ ಸರ್ಕಾರದ ಉಡಾನ್ - 3 ಯೋಜನೆಯ 3ನೇ ಹಂತದ ಪ್ರಾದೇಶಿಕ ಸಂಪರ್ಕ ಯೋಜನೆಯಡಿ ಜೂ. 7ರಿಂದ ಮೈಸೂರು- ಬೆಂಗಳೂರು ನಡುವೆ ವಿಮಾನಗಳ ಹಾರಾಟ ಪ್ರಾರಂಭವಾಗಲಿದೆ. 

ವಿಮಾನ ಸಂಪರ್ಕದಿಂದ ಮೈಸೂರಿನ ಸಾಮಾಜಿಕ, ಆರ್ಥಿಕ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿಗೆ ಅನುಕೂಲ ಮಾಡಿ ಕೊಟ್ಟಂತಾಗಲಿದೆ. 

ಈ ಸಂಬಂಧ ಪ್ರಧಾನಿ ಮೋದಿ ಹಾಗೂ ಕೇಂದ್ರದಲ್ಲಿ ಸಚಿವರಾಗಿದ್ದ ಜಯಂತ್ ಸಿನ್ಹಾ ಅವರಿಗೆ ಮೈಸೂರಿನ ಜನತೆ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ.