ಚೀನಾದ ಶಾಂಜೇನ್‌ನಲ್ಲಿ ಡ್ರ್ಯಾಗನ್ ವಿಮಾನಕ್ಕೆ ತೈಫೂನ್ ಚಂಡಮಾರುತ ಅಪ್ಪಳಿಸಿತ್ತು. ಆದಾಗ್ಯೂ ಪ್ರಾಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ ಕೆಳಗಿಳಿಸಲಾಗಿದೆ ಎಂಬ ಸಂದೇಶದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಬೀಜಿಂಗ್ (ಸೆ. 20): ಚೀನಾದ ಶಾಂಜೇನ್‌ನಲ್ಲಿ ಡ್ರ್ಯಾಗನ್ ವಿಮಾನಕ್ಕೆ ತೈಫೂನ್ ಚಂಡಮಾರುತ ಅಪ್ಪಳಿಸಿತ್ತು. ಆದಾಗ್ಯೂ ಪ್ರಾಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ ಕೆಳಗಿಳಿಸಲಾಗಿದೆ ಎಂಬ ಸಂದೇಶದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಅದರೊಂದಿಗೆ ‘ಬೀಜಿಂಗ್ ಕ್ಯಾಪಿಟಲ್ ಏರ್‌ಲೈನ್ಸ್‌ನಲ್ಲಿ ಒಟ್ಟಾರೆ 166 ಜನ ಪ್ರಯಾಣಿಕರಿದ್ದರು. ಅದರಲ್ಲಿ 5 ಜನ ಪ್ರಯಾಣಿಕರು ಸ್ವಲ್ಪಮಟ್ಟಿಗೆ ಗಾಯಗೊಂಡಿದ್ದಾರೆ’ ಎಂಬ ಒಕ್ಕಣೆಯನ್ನೂ ಬರೆಯಲಾಗಿದೆ. ಈ ವಿಡಿಯೋವನ್ನು ಕೋಟ್ಯಂತರ ಜನರು ವೀಕ್ಷಿಸಿದ್ದಾರೆ. ಸಾವಿರಾರು ಜನರು ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿ ಮೊದಲ ಅರ್ಧಭಾಗದ ವಿಡಿಯೋ ಕಪ್ಪುಬಿಳುಪು ಬಣ್ಣದಲ್ಲಿದ್ದರೆ, ಉಳಿದ ಅರ್ಧ ಭಾಗ ಬಣ್ಣದಿಂದ ಕೂಡಿದೆ.

ಮೊದಲಿಗೆ ವಿಮಾನವೊಂದು ಚಂಡಮಾರುತ ಅಪ್ಪಳಿಸಿದ್ದಕ್ಕೆ ಅಪಾಯಕಾರಿಯಾಗಿ ಗಾಳಿಯಲ್ಲಿ ತೇಲಾಡುತ್ತಾ ಲ್ಯಾಂಡ್ ಆಗುತ್ತದೆ. ಅನಂತರದಲ್ಲಿ ಜಾರುಬಂಡಿಯಂತೆ ಪ್ರಯಾಣಿಕರು ವಿಮಾನದಿಂದ ಜಾರಿ ಕೆಳಗಿಳಿಯುತ್ತಾರೆ. ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ನಿಜಕ್ಕೂ ಚೀನಾದಲ್ಲಿ ಚಂಡಮಾರುತ ಅಪ್ಪಳಿಸಿ ವಿಮಾನವೊಂದು ಅಪಾಯಕ್ಕೆ ಸಿಲುಕಿತ್ತೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಪತ್ತೆಯಾಗಿದೆ.

ಏಕೆಂದರೆ ಇದು ನಿಜವಾದ ವಿಡಿಯೋವೇ ಅಲ್ಲ. ಇದೊಂದು ಆ್ಯನಿಮೇಟೆಡ್ ವಿಡಿಯೋ. ಅಲ್ಲದೆ ಒಕ್ಕಣೆಯಲ್ಲಿ ಒಂದು ಕಡೆಗೆ ಡ್ರ್ಯಾಗನ್ ಏರ್‌ಲೈನ್ಸ್ ಎಂದು ಹೇಳಿದ್ದರೆ ಇನ್ನೊಂದು ಕಡೆ ಬೀಜಿಂಗ್ ಏರ್‌ಲೈನ್ಸ್ ಎಂದು ಹೇಳಲಾಗಿದೆ. ಡ್ರ್ಯಾಗನ್ ಏರ್‌ಲೈನ್ಸ್ ಹಾಂಕಾಂಗ್‌ನ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ. ಸದ್ಯ ಅದನ್ನು ಕ್ಯಥೆ ಡ್ರ್ಯಾಗನ್ ಎಂದು ಕರೆಯಲಾಗುತ್ತದೆ. ಇನ್ನು ಬೀಜಿಂಗ್ ಏರ್‌ಲೈನ್ಸ್ ಚೀನಾದ ಅತಿ ಅಗ್ಗದ ಏರ್‌ಲೈನ್ಸ್.

ಅಲ್ಲದೆ ವಿಡಿಯೋದ ಮೊದಲ ಭಾಗದಲ್ಲಿ ಬೋಯಿಂಗ್ 737 ವಿಮಾನ ಇದ್ದರೆ, 2 ನೇ ಭಾಗದಲ್ಲಿ 320 ಬೀಜಿಂಗ್ ಏರ್ ಲೈನ್ಸ್ ಇದೆ. ಹಾಗಾಗಿ ಈ ಸುದ್ದಿ ಸುಳ್ಳು ಎಂಬುದು ಸ್ಪಷ್ಟ.

-ವೈರಲ್ ಚೆಕ್