ಭಾರತದಲ್ಲಿ ಆಟೋಕ್ಕಿಂತಲೂ  ವಿಮಾನಯಾನ ಅಗ್ಗ?

news | Monday, February 5th, 2018
Suvarna Web Desk
Highlights

ಆಟೋಕ್ಕಿಂತಲೂ ವಿಮಾನಯಾನ ಅಗ್ಗ: ಕೇಂದ್ರ ಸಚಿವ

ಇಂಧೋರ್: ಆಟೋ ರಿಕ್ಷಾಕ್ಕೆ ತಗುಲುವ ವೆಚ್ಚಕ್ಕಿಂತ ಕಡಿಮೆ ವೆಚ್ಚದಲ್ಲಿ ವಿಮಾನ ಪ್ರಯಾಣ ಮಾಡುವ ವಾತಾವರಣವನ್ನು ನಾವು ನಿರ್ಮಿಸಿದ್ದೇವೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ್ ಸಿನ್ಹಾ ಹೇಳಿದ್ದಾರೆ.

ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ‘ಪ್ರಸ್ತುತ ಭಾರತದಲ್ಲಿ ಆಟೋಗೆ ತಗುಲುವ ವೆಚ್ಚಕ್ಕಿಂತ ಕಡಿಮೆ ವೆಚ್ಚದಲ್ಲಿ ವಿಮಾನ ಪ್ರಯಾಣ ಮಾಡಬಹುದು. ಇದಕ್ಕಾಗಿ ನನ್ನನ್ನು ಕೆಲವರು ಮೂರ್ಖ ಎನ್ನಬಹುದು. ಆದರೆ, ಇದೇ ಸತ್ಯ. ಆಟೋ ಸಂಚಾರಕ್ಕೆ ಪ್ರತಿ ಕಿ.ಮೀಗೆ 8ರಿಂದ 10 ರು. ಪಾವತಿಸ ಬೇಕು. ಆದರೆ, ವಿಮಾನದಲ್ಲಿ ಪ್ರತಿ ಕಿ.ಮೀಗೆ 5 ರು.ನಂತೆ ಪ್ರಯಾಣಿಸಬಹುದಾಗಿದೆ’ ಎಂದರು ಸಚಿವ ಸಿನ್ಹಾ.

Comments 0
Add Comment

    ಪತ್ನಿ ಹೆಬ್ಬಾರ್ ಅವರದ್ದು ಅಲ್ಲ, ಸಂಭಾಷಣೆ ಬಿಜೆಪಿಯವರದ್ದು ಹೌದೋ ಅಲ್ವೋ?

    karnataka-assembly-election-2018 | Monday, May 21st, 2018