Asianet Suvarna News Asianet Suvarna News

ಫುಟ್ ಬೋರ್ಡ್ ಮೇಲೆ ಪ್ರಯಾಣ: ಐವರು ವಿದ್ಯಾರ್ಥಿಗಳ ಸಾವು!

ಬೇಡ ವಿದ್ಯಾರ್ಥಿಗಳೇ ಇಂತಹ ಹುಚ್ಚು ಸಾಹಸ

ಐವರ ಜೀವ ತೆಗೆದ ಫುಟ್ ಬೋರ್ಡ್ ಪ್ರಯಾಣ

ಚೆನ್ನೈನ ಸೇಂಟ್ ಥಾಮಸ್ ಮೌಂಟ್ ಬಳಿ ಘಟನೆ

ತಲೆಗೆ ವಿದ್ಯುತ್ ಕಂಬ ತಗುಲಿ ದುರ್ಮರಣ 

Five travelling on footboard of Chennai local train die after hitting concrete fence
Author
Bengaluru, First Published Jul 24, 2018, 7:36 PM IST
  • Facebook
  • Twitter
  • Whatsapp

ಚೆನ್ನೈ(ಜು.24): ರೈಲ್ವೇ ಪುಟ್ ಬೋರ್ಡ್ ಮೇಲೆ ನಿಂತತು ಪ್ರಯಾಣಿಸುತ್ತಿದ್ದ ಐವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಚೆನ್ನೈನಲ್ಲಿ ನಡೆದಿದೆ.

ಚೆನ್ನೈ ನಿಂದ ತಿರುಮಲ್ಲೂರುಗೆ ಹೊರಟಿದ್ದ ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದರಿಂದ ಫುಟ್ ಬೋರ್ಡ್ ಮೇಲೆ ನಿಂತು ಈ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು. ಈ ವೇಳೆ ಹಳಿ ಪಕ್ಕದ ವಿದ್ಯುತ್ ಕಂಬಕ್ಕೆ ತಲೆ ಬಡಿದು ಐವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಇನ್ನುಳಿದ ೧೦ ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.    

ಮೃತ ವಿದ್ಯಾರ್ಥಿಗಳನ್ನು ಭರತ್, ಶಿವಕುಮಾರ್, ಶಂಕರ್, ಭಾರತಿ, ನವೀನ್ ಕುಮಾರ್ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಕುರಿತು ಸೇಂಟ್ ಥಾಮಸ್ ಮೌಂಟ್ ರೈಲ್ವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios