* ಬೆಂಗಳೂರಿಗರೇ, ಮನೆ ಬಾಡಿಗೆಗೆ ಕೊಡುವ ಮುನ್ನ ಎಚ್ಚರ ಎಚ್ಚರ...* ಮನೆ ಬಾಡಿಗೆಗೆ ಬಂದವರು ಮನೆ ಮೇಲೇ ಹಾಕ್ತಾರೆ ಕಣ್ಣು !* ಸಿಲಿಕಾನ್​ ಸಿಟಿಯಲ್ಲಿ ಬಯಲಾಯ್ತು ಟೆಕ್ಕಿಯ ಕರಾಮತ್ತು* ಮನೆ ಬಾಡಿಗೆಗೆ ಬಂದವನು ಮನೆ ಮೇಲೇ ಹಾಕಿದ ಕಣ್ಣು* ಮನೆ ಮಾಲೀಕರನ್ನು ಖಾಲಿ ಮಾಡಿಸಲು ಗೂಬೆ ಬಿಟ್ಟ ಟೆಕ್ಕಿ!

ಬೆಂಗಳೂರು(ಆ. 07): ಇದು ಬಾಡಿಗೆ ಮನೆ ಕೊಡೋರು ನೊಡಲೇಬೇಕಾದ ಸ್ಟೋರಿ.. ಯಾಕಂದ್ರೆ ಮನೆ ಬಾಡಿಗೆಗೆ ಅಂತ ಬಂದವನು ಮನೆಯನ್ನೇ ಕಬಳಿಸೋಕೆ ಮಾಡಿದ ಪ್ಲಾನ್​ ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರ.. ಮನೆ ಮಾಲೀಕನೇ ಮನೆ ಬಿಟ್ಟು ಹೋಗೋ ತರ ಮಾಡೋಕೆ ಆ ಖದೀಮ ಮನೆಗೆ ಗೂಬೆ ತಂದು ಬಿಟ್ಟಿದ್ದಾನೆ. ಮನೆಯಲ್ಲಿ ಗೂಬೆ ಕಾಣಿಸಿಕೊಂಡ್ರೆ ಅಶುಭ ಅನ್ನೋದು ಕೆಲವರ ನಂಬಿಕೆ. ಹೀಗಾಗಿ ಮನೆಗೆ ಗೂಬೆ ತಂದು ಬಿಟ್ರೆ ಮನೆ ಮಾಲೀಕರು ಮನೆ ಖಾಲಿ ಮಾಡ್ತಾರೆ ಅಂತ ನಂಬಿದ್ದ ಬಾಡಿಗೆದಾರ ಟೆಕ್ಕಿ ಮನಮೋಹನ್, ತನ್ನ ಗೆಳೆಯರ ಜೊತೆ ಸೇರ್ಕೊಂಡು ಈ ಪ್ಲಾನ್​ ಮಾಡಿದ್ದಾನೆ.

ರಾಜಸ್ತಾನ ಮೂಲದ ಮನಮೋಹನ್ ಕಾಟನ್'ಪೇಟೆಯ ಮನೆಯೊಂದರಲ್ಲಿ ಬಾಡಿಗೆಗೆ ಇದ್ದ. ಬಾಡಿಗೆಗೆ ಬಂದವನು ಮನೆ ಮೇಲೇ ಕಣ್ಣು ಹಾಕಿದ್ದ. ಹುಣಸೂರು ಅರಣ್ಯದಲ್ಲಿ ತಾನು ಹಿಡಿದಿದ್ದ ಗೂಬೆಯನ್ನು ಆತ ಕಾಟನ್​ಪೇಟೆಯ ಗೆಸ್ಟ್'ಹೌಸ್'ನಲ್ಲಿ ಬಚ್ಚಿಟ್ಟಿದ್ದ. ಟೆಕ್ಕಿಯ ಈ ಪ್ಲಾನ್​ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ವಂಚಕರು ಗೂಬೆಯನ್ನು 2.5 ಲಕ್ಷ ರೂಪಾಯಿಗೆ ಮಾರಾಟ ಮಾಡಲು ಪ್ಲಾನ್ ಮಾಡಿದ್ದರು. ಸಿಐಡಿ ಡಿವೈಎಸ್ಪಿ ಬಲರಾಮೇಗೌಡ ಮಾರ್ಗದರ್ಶನದಲ್ಲಿ ಪಿಎಸ್'ಐ ನರೇಂದ್ರಬಾಬು ಕಾರ್ಯಾಚರಣೆ ನಡೆಸಿ ಅವರೆಲ್ಲರನ್ನೂ ಬಂಧಿಸಿದ್ದಾರೆ. ಕಾಟನ್'ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.