ಡೆಹ್ರಾಡೂನ್(ಜು.25): PUBG ಆಟ ಆಡದಂತೆ ಪೋಷಕರು ಗದರಿಸಿದ ಹಿನ್ನೆಲೆಯಲ್ಲಿ ಐವರು ಅಪ್ರಾಪ್ತರು ಮನೆ ಬಿಟ್ಟ ಘಟನೆ ಉತ್ತರಾಖಂಡ್ ರಾಜಧಾನಿ ಡೆಹ್ರಾಡೂನ್’ನಲ್ಲಿ ನಡೆದಿದೆ.

PUBG ಆಟಕ್ಕೆ ಮನಸೋತ ಅಪ್ರಾಪ್ತರು ನಿರಂತರವಾಗಿ ಆಟದಲ್ಲಿ ತಲ್ಲೀನರಾಗಿರುತ್ತಿದ್ದರು. ಈ ಹಿನ್ನೆಲೆಯಲ್ಲಿ ಪೋಷಕರು ಆಟ ಆಡದಂತೆ ಗದರಿಸಿದ್ದಾರೆ.

ಇದರಿಂದ ಬೇಸತ್ತ ಅಪ್ರಾಪ್ತರು ಮನೆ ಬಿಟ್ಟು ಹೋಗಿದ್ದರು. ಇದರಿಂದ ಗಾಬರಿಗೊಂಡಿದ್ದ ಪೋಷಕರು ಪೊಲೀಸರಿಗೆ ತಮ್ಮ ಮಕ್ಕಳು ಕಾಣೆಯಾದ ಕುರಿತು ದೂರು ನೀಡಿದ್ದರು.

ಸದ್ಯ ಐವರೂ ಬಾಲಕರನ್ನು ದೆಹಲಿಯಲ್ಲಿ ಪತ್ತೆ ಮಾಡಲಾಗಿದ್ದು, ಪೋಷಕರ ಮಡಿಲಿಗೆ ಸುರಕ್ಷಿತವಾಗಿ ಸೇರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.