ಇಂತಹ ಹೃದಯ ಮಿಡಿಯುವ ಘಟನೆ ನಡೆದದ್ದು ಕಲಬುರಗಿ ಬಸವನಗರ ಬಡಾವಣೆಯಲ್ಲಿ. ಈ ಬಡಾವಣೆಯ ವಚ್ಚಾ ಕುಟಂಬದ ತಿಪ್ಪಣ್ಣ ವಚ್ಚಾ ಎಂಬ 75 ವರ್ಷದ ಅಜ್ಜ ನಿನ್ನೆ ನಿಧನರಾಗಿದ್ರು. ಇವತ್ತು ಅವರ ಅಂತ್ಯಕ್ರಿಯೆ ನೆರವೇರಬೇಕಿತ್ತು.
ಕಲಬುರಗಿ(ನ.09): ಐನೂರು ಸಾವಿರ ರೂಪಾಯಿ ನೋಟು ರದ್ದು ಗೊಳಿಸಿದ ಕೇಂದ್ರದ ನಿರ್ಧಾರ, ಹಿರಿಯ ಜೀವಿಯೊಬ್ಬರ ಅಂತ್ಯ ಕ್ರಿಯೆ ಗೆ ಅಡ್ಡಿಯಾಗಿದೆ.
ಇಂತಹ ಹೃದಯ ಮಿಡಿಯುವ ಘಟನೆ ನಡೆದದ್ದು ಕಲಬುರಗಿ ಬಸವನಗರ ಬಡಾವಣೆಯಲ್ಲಿ. ಈ ಬಡಾವಣೆಯ ವಚ್ಚಾ ಕುಟಂಬದ ತಿಪ್ಪಣ್ಣ ವಚ್ಚಾ ಎಂಬ 75 ವರ್ಷದ ಅಜ್ಜ ನಿನ್ನೆ ನಿಧನರಾಗಿದ್ರು. ಇವತ್ತು ಅವರ ಅಂತ್ಯಕ್ರಿಯೆ ನೆರವೇರಬೇಕಿತ್ತು.
ಹೊಸ ಬಟ್ಟೆ, ಹೂವಿನ ಹಾರ ತರಲು ಹಣ ಬೇಕಿತ್ತು. ಆದ್ರೆ, ಅವರ ಬಳಿ ಇದ್ದದ್ದೆಲ್ಲ 500 ರೂಪಾಯಿ ನೋಟುಗಳೆ. ಪರಿಣಾಮ, ಮಾರ್ಕೆಟ್ನಲ್ಲಿ ಖರೀದಿಗೆ ಹೋದರೆ, ಯಾರೂ ಹಣ ಪಡೆಯುತ್ತಿಲ್ಲ ಇದರಿಂದ, ಇಡೀ ಕುಟುಂಬ ದಿಕ್ಕ ತೋಚದೆ ಶವ ಇಟ್ಟುಕೊಂಡು ಕುಳಿತಿದೆ.