Asianet Suvarna News Asianet Suvarna News

ಕೇರಳದಲ್ಲಿ ಇಲಿಜ್ವರಕ್ಕೆ ಮತ್ತೆ 5 ಜನ ಬಲಿ

ಕೇರಳದಲ್ಲಿ ವರುಣ ಆರ್ಭಟ ನಿಲ್ಲಿಸಿದ್ದಾನೆ. ಆದರೆ, ಆಫ್ಟರ್ ಎಫೆಕ್ಟ್ ಮುಂದುವರಿದಿದೆ. ಜನರು ಅನೇಕ ಕಾಯಿಲೆಗಳಿಗೆ ಬಲಿಯಾಗುತ್ತಿದ್ದು, ಇಲಿ ಜ್ವರಕ್ಕೆ ಐವರು ಮೃತರಾಗಿದ್ದಾರೆ.

Five die for rat fever in Kerala
Author
Bengaluru, First Published Sep 4, 2018, 10:55 AM IST

ತಿರುವನಂತಪುರಂ: ಭೀಕರ ಮಳೆ, ಪ್ರವಾಹದಿಂದ ತತ್ತರಿಸಿರುವ ಕೇರಳದಲ್ಲೀಗ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಹೆಚ್ಚಿದೆ. ಪ್ರವಾಹ ಪೀಡಿತ ರಾಜ್ಯದಲ್ಲಿ ಸೋಮವಾರ ಇಲಿ ಜ್ವರಕ್ಕೆ ಐವರು ಬಲಿಯಾಗಿದ್ದು, ಇನ್ನೂ ಎಂಟು ಪ್ರಕರಣಗಳು ಪತ್ತೆಯಾಗಿವೆ.

ಅತ್ಯಂತ ಪ್ರವಾಹ ಪೀಡಿತವಾಗಿದ್ದ ಕಲ್ಲಿಕೋಟೆಯಲ್ಲಿ ಸೋಮವಾರ ಎಂಟು ಮಂದಿಯಲ್ಲಿ ಇಲಿ ರೋಗದ ಲಕ್ಷಣಗಳು ಗೋಚರಿಸಿವೆ. ಇನ್ನೊಂದೆಡೆ ಕಲ್ಲಿಕೋಟೆ ನಿವಾಸಿಗಳಾದ ಅನಿಲ್‌(54), ನಾರಾಯಣಿ(80) ಮತ್ತು ರವಿ(59), ಪಠಣಮಿತ್ತ ನಿವಾಸಿ ರಂಜು, ತೋಡುಪುಳ ನಿವಾಸಿ ಜೋಸೆಫ್‌ ಮ್ಯಾಥ್ಯು(58) ಇಲಿ ಜ್ವರದಿಂದ ಮೃತಪಟ್ಟಿರುವುದು ದೃಢಪಟ್ಟಿದೆ.

ಕೇರಳ ಪ್ರವಾಹಕ್ಕೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಲುಷಿತ ನೀರಿನಿಂದಾಗಿ ಇಲಿ ಜ್ವರ ಹರಡಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಇದರೊಂದಿಗೆ ಕಳೆದ ಕೆಲ ದಿನಗಳಲ್ಲಿ ಇಲಿ ಜ್ವರಕ್ಕೆ ಬಲಿಯಾದವರ ಸಂಖ್ಯೆ 20ಕ್ಕೆ ಏರಿದೆ.

ಸೊಳ್ಳೆಗೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios