ಹಲ್ಲೆಗೊಳಗಾದ ವಿದ್ಯಾರ್ಥಿಯೋರ್ವ ಮಾಧ್ಯಮಗಳ ಜೊತೆಗೆ ಮಾತನಾಡಿದ್ದು, ನಾವು ಸಹಾಯಕ್ಕಾಗಿ ಅಂಗಲಾಚಿದರೂ, ಯಾರು ಪೊಲೀಸರಿಗೆ ಕರೆ ಮಾಡಲಿಲ್ಲ. ನಮ್ಮ ಕಾಲೇಜು ಕೂಡಾ ನಮ್ಮ ನೆರವಿಗೆ ಬರಲಿಲ್ಲವೆಂದು ಹೇಳಿದ್ದಾನೆ.
ನೊಯ್ಡಾ (ಮಾ.28): ನೈಜಿರಿಯಾ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ನೊಯ್ಡಾ ಪೊಲೀಸರು 5 ಮಂದಿಯನ್ನು ಬಂಧಿಸಿದ್ದಾರೆ.
ಪೊಲೀಸರು 5 ಮಂದಿಯನ್ನು ಬಂಧಿಸಿದ್ದಾರೆ, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ, ಎಂದು ಪೊಲೀಸರು ಹೇಳಿದ್ದಾರೆ.
ಹಲ್ಲೆಗೊಳಗಾದ ವಿದ್ಯಾರ್ಥಿಯೋರ್ವ ಮಾಧ್ಯಮಗಳ ಜೊತೆಗೆ ಮಾತನಾಡಿದ್ದು, ನಾವು ಸಹಾಯಕ್ಕಾಗಿ ಅಂಗಲಾಚಿದರೂ, ಯಾರು ಪೊಲೀಸರಿಗೆ ಕರೆ ಮಾಡಲಿಲ್ಲ. ನಮ್ಮ ಕಾಲೇಜು ಕೂಡಾ ನಮ್ಮ ನೆರವಿಗೆ ಬರಲಿಲ್ಲವೆಂದು ಹೇಳಿದ್ದಾನೆ.
ವಿದ್ಯಾರ್ಥಿಗಳ ಹಲ್ಲೆ ಪ್ರಕರಣವನ್ನು ಸೂಕ್ತವಾಗಿ ತನಿಖಿಸಲಾಗುವುದೆಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಭರವಸೆ ನೀಡಿದ್ದಾರೆ.
ಪ್ರಕರಣ ಹಿನ್ನೆಲೆ:
ಡ್ರಗ್ಸ್ ಸೇವನೆಯಿಂದ 12ನೇ ತರಗತಿ ವಿದ್ಯಾರ್ಥಿಯೊಬ್ಬ ಸಾವನಪ್ಪಿದ್ದು, ಅದಕ್ಕೆ ಅಲ್ಲಿ ವಾಸಿಸುವ ಆಫ್ರಿಕನ್ ವಿದ್ಯಾರ್ಥಿಗಳು ಕಾರಣವೆಂದು ಸ್ಥಳೀಯರು ಆರೋಪಿಸಿದ್ದರು. ಬಳಿಕ ಪೊಲೀಸರು 5 ಮಂದಿ ನೈಜಿರಿಯನ್ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದು, ಸಾಕ್ಷ್ಯಾಧಾರಗಳಿಲ್ಲದ ಕಾರಣ ಬಿಡುಗಡೆ ಮಾಡಿದ್ದರು. ಆದರೆ ಅದರಿಂದ ಕುಪಿತರಾದ ಸ್ಥಳೀಯ ಗುಂಪೊಂದು ನಾಲ್ಕು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆನ್ನಲಾಗಿದೆ.
(ಫೋಟೋ ಕೃಪೆ: ಏಎನ್ಐ)