Asianet Suvarna News Asianet Suvarna News

ಉಡುಪಿ ಜಿಲ್ಲಾಧಿಕಾರಿಗಳ ಕೊಲೆ ಯತ್ನ ಪ್ರಕರಣ: ಐವರು ವಶಕ್ಕೆ

ಉಡುಪಿ ಜಿಲ್ಲಾಧಿಕಾರಿಗಳ ಕೊಲೆ ಯತ್ನ ಪ್ರಕರಣ ಸಂಬಂಧ ಮತ್ತೆ ಐವರನ್ನು ವಶಕ್ಕೆ ಪಡೆಯಲಾಗಿದೆ.

Five Accused Arrest to Connection With Udupi DC Attack Case
  • Facebook
  • Twitter
  • Whatsapp

ಉಡುಪಿ (ಏ.06): ಉಡುಪಿ ಜಿಲ್ಲಾಧಿಕಾರಿಗಳ ಕೊಲೆ ಯತ್ನ ಪ್ರಕರಣ ಸಂಬಂಧ ಮತ್ತೆ ಐವರನ್ನು ವಶಕ್ಕೆ ಪಡೆಯಲಾಗಿದೆ.

ಭಾನುವಾರ ತಡ ರಾತ್ರಿ ಕುಂದಾಪುರ ತಾಲೂಕಿನಲ್ಲಿ ಕಂಡ್ಲೂರಿನಲ್ಲಿ ಮರಳು ಅಡ್ಡಗೆ ಡಿಸಿ ಪ್ರಿಯಾಂಕ ಮೇರಿ ಅವರು ದಾಳಿ ನಡೆಸಿದಾಗ ಐವತ್ತಕ್ಕೂ ಅಧಿಕ ಮಂದಿ ಕೊಲೆ ಯತ್ನ ನಡೆಸಿದ್ದರು. ಇದಾದ 24 ಗಂಟೆಯೊಳಗೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ನಿನ್ನೆ ಮತ್ತೋರ್ವನ ಬಂಧನವಾಗಿತ್ತು. ಇವತ್ತು ಮತ್ತೆ ಐವರನ್ನು ವಶಕ್ಕೆ ಪಡೆಯಲಾಗಿದೆ.   ಇಂದು ಬಂಧನಕ್ಕೊಳಗಾದವರು ಉತ್ತರ ಪ್ರದೇಶ ಮೂಲದ ಕಾರ್ಮಿರಾಗಿದ್ದು, ಆರೋಪಿಗಳ ಮೇಲೆ ಜಿಲ್ಲಾಧಿಕಾರಿಗಳ ದೂರಿನಂತೆ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಇನ್ನೂ ಪ್ರಕರಣದಲ್ಲಿ ಮತ್ತಷ್ಟು ಮಂದಿಯ ಬಂಧನವಾಗುವ ಸಾಧ್ಯತೆಯಿದೆ.

ಈ ಮರಳು ಅಡ್ಡೆ ಯಾರಿಗೆ ಸೇರಿದ್ದು ಅನ್ನೋದು ಇನ್ನೂ ನಿಗೂಢವಾಗಿದೆ. ಅವರ ಮೇಲೂ ಕ್ರಮ ಕೈಗೊಳ್ಳಬೇಕೆಂದು ಜಿಲ್ಲೆ ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ. ಬಂಧಿತ ವಿವರ ಹೀಗಿದೆ. ಸುಭಾಷ್, ಮಹಮ್ಮದ್ ಸಫಾನ್, ಮಹಮ್ಮದ್ ಶಾಕೀಪ್, ಅಪ್ಸಾನ್, ಅಬ್ದುಲ್ ಸತ್ತಾರ್, ಭಾಸ್ಕರ ಮೊಗವೀರ ಯುಪಿ ಮೂಲದ ಗೋರಕ್ ನಾಥ್, ಭೂತಾನ್, ಅನಿಲ್, ಸರವಣ ಕುಮಾರ್, ರವಿ ಎಂದು ಗುರುತಿಸಲಾಗಿದೆ.

Follow Us:
Download App:
  • android
  • ios