ಬೆಂಗಳೂರಿನಿಂದ ಮುಂಬೈಗೆ ನಾಲ್ಕು ಟನ್ ವಿವಿಧ ಜಾತಿಯ ಮೀನುಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಎದುರಾದ ವಾಹನವೊಂದನ್ನು ತಪ್ಪಿಸಲು ಹೋಗಿ ರಸ್ತೆ ಪಕ್ಕದ ಕಂದಕಕ್ಕೆ ಉರುಳಿ ಬಿದ್ದಿತ್ತು. ಮೀನುಗಳೆಲ್ಲಾ ಹೊರ ಬಿದ್ದಿದ್ದರಿಂದ ಸ್ಥಳೀಯ ಜನರೆಲ್ಲಾ ಮೀನುಗಳನ್ನು ಚೀಲಗಳಲ್ಲಿ ತುಂಬಿಸಿಕೊಳ್ಳಲು ಮುಗಿಬಿದ್ದರು. ಇದರಿಂದ ಲಾರಿಯಲ್ಲಿದ್ದ ಸುಮಾರು ಐದು ಲಕ್ಷ ರೂಪಾಯಿ ಮೌಲ್ಯದ ಮೀನುಗಳನ್ನು ಜನರು ಹೊತ್ತೊಯ್ದರು.
ಧಾರವಾಡ(ಡಿ.09): ಮೀನಿನ ಲಾರಿಯೊಂದು ಉರುಳಿ ಬಿದ್ದು, ಮೀನಿಗಾಗಿ ಜನರೆಲ್ಲಾ ಮುಗಿಬಿದ್ದ ಘಟನೆ ಧಾರವಾಡ ಹೊರ ಯರಿಕೊಪ್ಪ ಬೈಪಾಸ್ ಬಳಿ ನಡೆದಿದೆ.
ಬೆಂಗಳೂರಿನಿಂದ ಮುಂಬೈಗೆ ನಾಲ್ಕು ಟನ್ ವಿವಿಧ ಜಾತಿಯ ಮೀನುಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಎದುರಾದ ವಾಹನವೊಂದನ್ನು ತಪ್ಪಿಸಲು ಹೋಗಿ ರಸ್ತೆ ಪಕ್ಕದ ಕಂದಕಕ್ಕೆ ಉರುಳಿ ಬಿದ್ದಿತ್ತು. ಮೀನುಗಳೆಲ್ಲಾ ಹೊರ ಬಿದ್ದಿದ್ದರಿಂದ ಸ್ಥಳೀಯ ಜನರೆಲ್ಲಾ ಮೀನುಗಳನ್ನು ಚೀಲಗಳಲ್ಲಿ ತುಂಬಿಸಿಕೊಳ್ಳಲು ಮುಗಿಬಿದ್ದರು. ಇದರಿಂದ ಲಾರಿಯಲ್ಲಿದ್ದ ಸುಮಾರು ಐದು ಲಕ್ಷ ರೂಪಾಯಿ ಮೌಲ್ಯದ ಮೀನುಗಳನ್ನು ಜನರು ಹೊತ್ತೊಯ್ದರು.
ಲಾರಿ ಮೇಲೆತ್ತುವ ಕಾರ್ಯಾಚರಣೆ ವೇಳೆಯೂ ಮೀನಿಗಾಗಿ ಮುಗಿಬಿದ್ದ ಜನರು ಅಡಚಣೆ ಉಂಟು ಮಾಡಿದ್ದರಿಂದ ಅವರನ್ನು ಚದುರಿಸಲು ಪೊಲೀಸರು ಲಾಠಿ ಕೂಡ ಬೀಸಬೇಕಾಯ್ತು.