ಯುವ ಎಂಜಿನಿಯರ್‌ಗಳಿಗೆ ಹೊಸ ಐಟಿ ಉದ್ದಿಮೆಯನ್ನು ಆರಂಭಿಸಲು ನೆರವಾಗುವ ಬಹುನಿರೀಕ್ಷಿತ ದೇಶದ ಮೊದಲ ಸ್ಟಾರ್ಟಪ್ ಇನ್‌ಕ್ಯುಬೇಶನ್ ಕೇಂದ್ರವನ್ನು ಶುಕ್ರವಾರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳೂರಿನಲ್ಲಿ ಲೋಕಾರ್ಪಣೆಗೊಳಿಸಿದರು.
ಮಂಗಳೂರು (ಡಿ.30): ಯುವ ಎಂಜಿನಿಯರ್ಗಳಿಗೆ ಹೊಸ ಐಟಿ ಉದ್ದಿಮೆಯನ್ನು ಆರಂಭಿಸಲು ನೆರವಾಗುವ ಬಹುನಿರೀಕ್ಷಿತ ದೇಶದ ಮೊದಲ ಸ್ಟಾರ್ಟಪ್ ಇನ್ಕ್ಯುಬೇಶನ್ ಕೇಂದ್ರವನ್ನು ಶುಕ್ರವಾರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳೂರಿನಲ್ಲಿ ಲೋಕಾರ್ಪಣೆಗೊಳಿಸಿದರು. ತಮ್ಮ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ₹ 1.50 ಕೋಟಿ ಮೊತ್ತವನ್ನು ಇದಕ್ಕಾಗಿ ವಾಣಿಜ್ಯ ಸಚಿವೆಯಾಗಿದ್ದಾಗ ನಿರ್ಮಲಾ ಸೀತಾರಾಮನ್ ಬಿಡುಗಡೆಗೊಳಿಸಿದ್ದರು.
11 ತಿಂಗಳಲ್ಲಿ 60 ಯುವ ಎಂಜಿನಿಯರ್ಗಳಿಗೆ ಉದ್ದಿಮೆ ಸ್ಥಾಪಿಸಲು ತಮ್ಮ ಯೋಜನೆಯನ್ನು ಪಕ್ವಗೊಳಿಸುವ ಕೇಂದ್ರವಾಗಿ ಇದನ್ನು ರೂಪು ಗೊಳಿಸಲಾಗಿದೆ. ಬಳಿಕ ಸಮಾರಂಭದಲ್ಲಿ ಮಾತನಾಡಿದ ಸಚಿವೆ ನಿರ್ಮಲಾ ಸೀತಾರಾಮನ್, ಸಣ್ಣ ಉದ್ದಿಮೆಯಿಂದ ತೊಡಗಿದೊಡ್ಡ ಕೈಗಾರಿಕೆ ಸ್ಥಾಪನೆಯವರೆಗೆ ಸ್ಟಾರ್ಟಪ್ ನೆರವಾಗುತ್ತಿದ್ದು, ಬೆಂಗಳೂರಿಗೆ ಪರ್ಯಾಯ ವಾಗಿ ಮಂಗಳೂರನ್ನು ಐಟಿ ವಲಯವಾಗಿ ಬೆಳೆಸಲು ಈ ಕೇಂದ್ರ ಪ್ರಯೋಜನಕಾರಿ ಯಾಗಲಿದೆ.
ಸಾಮಾನ್ಯರಿಗೆ ಸುಲಭದ ಬಾಡಿಗೆ ದರದಲ್ಲಿ ಇದರ ಸೇವೆ ಲಭ್ಯವಾಗಲಿದ್ದು, ಕರಾವಳಿಯ ಯುವ ಎಂಜಿನಿಯರ್ಗಳು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದರು. ಇಲ್ಲಿಗೆ ಸೇರ್ಪಡೆಯಾಗಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಅಭ್ಯರ್ಥಿಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡುತ್ತದೆ ಎಂದರು.
55 ಶಾಲೆಗಳಲ್ಲಿ ಟಿಂಕರಿಂಗ್ ಲ್ಯಾಬ್: ಇದುವರೆಗೆ ದೆಹಲಿಗೆ ಸೀಮಿತವಾಗಿದ್ದ ಅಟಲ್ ಟಿಂಕರಿಂಗ್ ಕೇಂದ್ರಗಳನ್ನು ಕರ್ನಾಟಕಕ್ಕೆ ತರಲಾಗಿದೆ. ಕರಾವಳಿಯ 3 ಜಿಲ್ಲೆಗಳ 100 ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಅಟಲ್ ಟಿಕರಿಂಗ್ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ ಎಂದರು.
