ತನಿಖೆ ನಡೆಸುತ್ತಿರುವ ಎಸ್'ಐಟಿ ತಂಡದ ಸದಸ್ಯರೊಬ್ಬರು ಈ ಬಗ್ಗೆ ಮಾಹಿತಿ ನೀಡಿದದಾರೆ. ಟ್ರೈನಿಂಗ್ ಎಂಬ ವಿಶೇಷ ತಂತ್ರಜ್ಞಾ ಸಾಧನವನ್ನು ಎಸ್'ಐಟಿ ಬಳಸಿದೆ. ಇಂಥದ್ದೊಂದು ತಂತ್ರಜ್ಞಾನವು ಭಾರತದ ಮಟ್ಟಿಗೆ ಹೊಸತು. ದೇಶದಲ್ಲಿ ಇದೇ ಮೊದಲ ಬಾರಿಗೆ ಟ್ರೈನಿಂಗ್ ಸಾಧನವನ್ನು ಬಳಸಿ ಹಂತಕರ ಚಹರೆಯನ್ನು ಗುರುತುಹಿಡಿಯಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಬೆಂಗಳೂರು(ಅ. 14): ಗೌರಿ ಲಂಕೇಶ್ ಹತ್ಯೆ ಘಟಿಸಿ ತಿಂಗಳು ಕಳೆದರೂ ಹಂತಕರನ್ನು ಹಿಡಿಯಲು ಸಾಧ್ಯವಾಗಿಲ್ಲ. ಇಂದು ಪೊಲೀಸರು ಇಬ್ಬರು ವ್ಯಕ್ತಿಗಳ ಚಹರೆಯ ರೇಖಾ ಚಿತ್ರಗಳನ್ನು ಇಂದು ಬಿಡುಗಡೆ ಮಾಡಿದ್ದಾರೆ. ಸದ್ಯಕ್ಕೆ ಈ ಪ್ರಕರಣದ ತನಿಖೆಯಲ್ಲಿ ಕಾಣಸಿಗುತ್ತಿರುವ ಪ್ರಮುಖ ಟ್ವಿಸ್ಟ್ ಅಂದರೆ ಇದು. ಕೆಲ ಸಿಸಿಟಿವಿಯಲ್ಲಿ ಹಂತಕರು ಸೆರೆಯಾಗಿದ್ದರಾದರೂ ಅವರ ಚಹರೆ ತೀರಾ ಅಸ್ಪಷ್ಟವಾಗಿ ಗೋಚರಿಸುತತ್ತಿದೆ. ಹಂತಕರ ಚಹರೆ ಗುರುತಿಸುವುದು ಪೊಲೀಸರಿಗೆ ತೀರಾ ತಲೆನೋವಾಗಿತ್ತು. ಆದಾಗ್ಯೂ ಪೊಲೀಸರು ಹಂತಕರ ಚಹರೆಯ ಸ್ಕೆಚ್'ನ್ನು ಇಂದು ಹೇಗೆ ಬಿಡುಗಡೆ ಮಾಡಿದರು? ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ.

ತನಿಖೆ ನಡೆಸುತ್ತಿರುವ ಎಸ್'ಐಟಿ ತಂಡದ ಸದಸ್ಯರೊಬ್ಬರು ಈ ಬಗ್ಗೆ ಮಾಹಿತಿ ನೀಡಿದದಾರೆ. ಟ್ರೈನಿಂಗ್ ಎಂಬ ವಿಶೇಷ ತಂತ್ರಜ್ಞಾ ಸಾಧನವನ್ನು ಎಸ್'ಐಟಿ ಬಳಸಿದೆ. ಇಂಥದ್ದೊಂದು ತಂತ್ರಜ್ಞಾನವು ಭಾರತದ ಮಟ್ಟಿಗೆ ಹೊಸತು. ದೇಶದಲ್ಲಿ ಇದೇ ಮೊದಲ ಬಾರಿಗೆ ಟ್ರೈನಿಂಗ್ ಸಾಧನವನ್ನು ಬಳಸಿ ಹಂತಕರ ಚಹರೆಯನ್ನು ಗುರುತುಹಿಡಿಯಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಟ್ರೈನಿಂಗ್ ವಿಶೇಷತೆ ಏನು?
ಸಿಸಿಟಿವಿಯಲ್ಲಿ ಹಂತಕನ ಮುಖದ ಒಂದು ಬದಿ ಮಾತ್ರ ಕಾಣುತ್ತಿತ್ತು. ಇಷ್ಟನ್ನೇ ಇಟ್ಟುಕೊಂಡು ಟ್ರೈನಿಂಗ್ ಸಾಧನದ ಮೂಲಕ ಹಂತಕನ ಸುಳಿವು ಪತ್ತೆಹಚ್ಚಲಾಯಿತು. ಭಾರತೀಯರ ಸಾಮಾನ್ಯ ಮುಖ ಲಕ್ಷಣಗಳನ್ನು ಅಳವಡಿಸಿ ಇಡೀ ಮುಖಚಹರೆ ರೂಪಿಸಲು ಟ್ರೈನಿಂಗ್ ಟೆಕ್ನಿಕ್'ನಿಂದ ಸಾಧ್ಯವಾಯಿತಂತೆ.

ಮಾಹಿತಿ: ಹಿಂದೂಸ್ತಾನ್ ಟೈಮ್ಸ್