ಸ್ವತಂತ್ರ ಭಾರತದ ಅತಿದೊಡ್ಡ ತೆರಿಗೆ ಸುಧಾರಣೆ ಎಂದೇ ಕರೆಯಲಾಗುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿ ನಂತರ ಮಂಡನೆಯಾಗುತ್ತಿರುವ ಮೊದಲ ಬಜೆಟ್ ಇದಾಗಿರಲಿದ್ದು, ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ಸತತ ಐದನೇ ಆಯವ್ಯಯವಾಗಿರಲಿದೆ.

ನವದೆಹಲಿ(ಡಿ.4): ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್ -ಫೆ.1 ರಂದು ಮಂಡನೆಯಾಗುವ ನಿರೀಕ್ಷೆ ಇದೆ. 2019ಕ್ಕೆ ಲೋಕಸಭೆ ಚುನಾವಣೆ ನಡೆಯುವುದರಿಂದ ಪೂರ್ಣ ಪ್ರಮಾಣದ ಬಜೆಟ್ ಮಂಡನೆಗೆ ಅವಕಾಶವಿರುವುದಿಲ್ಲ. ಲೇಖಾನುದಾನ ಪಡೆದುಕೊಳ್ಳಬೇಕಾಗುತ್ತದೆ. ಆದ ಕಾರಣ ಈ ಬಾರಿಯದ್ದು ಚುನಾವಣಾ ಬಜೆಟ್ ಆಗಿರುವ ಸಂಭವವಿದೆ.

ಸ್ವತಂತ್ರ ಭಾರತದ ಅತಿದೊಡ್ಡ ತೆರಿಗೆ ಸುಧಾರಣೆ ಎಂದೇ ಕರೆಯಲಾಗುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿ ನಂತರ ಮಂಡನೆಯಾಗುತ್ತಿರುವ ಮೊದಲ ಬಜೆಟ್ ಇದಾಗಿರಲಿದ್ದು, ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ಸತತ ಐದನೇ ಆಯವ್ಯಯವಾಗಿರಲಿದೆ. ಜ.30ರಂದು ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗುವ ನಿರೀಕ್ಷೆ ಇದ್ದು, ಅಂದು ಜಂಟಿ ಸದನ ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಭಾಷಣ ಮಾಡಲಿದ್ದಾರೆ. ಮರುದಿನ ಅಂದರೆ ಜ.31ರಂದು ಆರ್ಥಿಕ ಸಮೀಕ್ಷೆ ಮಂಡನೆಯಾಗಿ, ಫೆ.1ರಂದು ಆಯವ್ಯಯ ಮಂಡನೆಯಾಗುವ ಸಂಭವವಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಡಿ.15ರಿಂದ ಸಂಸತ್ತಿನ ಚಳಿಗಾಲದ ಅವೇಶನ ಆರಂಭವಾಗಿ ಜ.5ಕ್ಕೆ ಅಂತ್ಯಗೊಳ್ಳಲಿದೆ. ಜ.30ರಿಂದ ಬಜೆಟ್ ಅವೇಶನ ಆರಂಭವಾದರೆ, ಎರಡು ಅಧಿವೇಶನಗಳ ನಡುವಣ ಅಂತರ, ಸಂಪ್ರದಾಯಕ್ಕೆ ವಿರುದ್ಧವಾಗಿ ಒಂದು ತಿಂಗಳಿಗಿಂತ ಕಡಿಮೆಯಾಗಲಿದೆ. ಈ ಹಿಂದೆ 1976ರಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಚಳಿಗಾಲದ ಅವೇಶನವನ್ನು ಜನವರಿವರೆಗೂ ನಡೆಸಲಾಗಿತ್ತು. ಆದರೆ -ಫೆಬ್ರವರಿ ಅಂತ್ಯದಲ್ಲಿ ಬಜೆಟ್ ಮಂಡನೆಯಾಗುತ್ತಿದ್ದರಿಂದ ಎರಡು ಅಧಿವೇಶನಗಳ ನಡುವೆ ಒಂದು ತಿಂಗಳ ಅಂತರವಿರುತ್ತಿತ್ತು.