ನಿನ್ನೆ ರಾತ್ರಿ ರಾಮ್ ರಹೀಂಗೆ ನಾಲ್ಕು ರೊಟ್ಟಿ ನೀಡಲಾಗಿತ್ತಂತೆ. ಆದ್ರೆ ಅರ್ಧ ರೊಟ್ಟಿ ತಿಂದಿದ್ದಾನೆ ಎನ್ನಲಾಗಿದೆ. ತುಂಬಾ ಸಮಯ ರೊಟ್ಟಿಯನ್ನೇ ದಿಟ್ಟಿಸುತ್ತಾ ಕುಳಿತಿದ್ದನಂತೆ. ನಂತರ ಹಸಿವಿಲ್ಲವೆಂದು ವಾಪಸ್ ನೀಡಿದ್ದಾನೆ. ಆರೋಗ್ಯ ಸರಿ ಇದೆಯಾ? ಡಾಕ್ಟರ್ ಕರೆಸಲಾ? ಎಂದು ಜೈಲಿನ ವಾರ್ಡನ್ ಕೇಳಿದಾಗ, ವೈದ್ಯರನ್ನು ಕರೆಸಿ ಎಂದು ಬಾಬಾ ಹೇಳಿದ್ದಾನೆ. ಡಾಕ್ಟರ್ ಬಂದು ತಪಾಸಣೆ ಮಾಡಿದಾಗ ಬಾಬಾ ಆರೋಗ್ಯ ಚೆನ್ನಾಗಿರುವುದು ತಿಳಿದುಬಂದಿದೆ.
ರೋಹ್ಟಕ್(ಆ. 29): ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ರಾಮ್ ರಹೀಂ ಬಾಬಾ ಜೈಲಿನಲ್ಲಿ ನಿನ್ನೆ ಮೊದಲ ರಾತ್ರಿ ಕಳೆದಿದ್ದಾನೆ. ತೀರ್ಪು ಬರುವ ಮುನ್ನ ವಿಚಾರಾಣಾಧೀನ ಕೈದಿಯಾಗಿದ್ದಾಗ ರಾಮ್ ರಹೀಂಗೆ ಕೈದಿ ನಂ. 1997 ಕೊಡಲಾಗಿತ್ತು. ಇದೀಗ ಅಪರಾಧಿಯಾಗಿದ್ದು 8647 ನಂಬರ್ ನೀಡಲಾಗಿದೆ.
ನಿನ್ನೆ ರಾತ್ರಿ ರಾಮ್ ರಹೀಂಗೆ ನಾಲ್ಕು ರೊಟ್ಟಿ ನೀಡಲಾಗಿತ್ತಂತೆ. ಆದ್ರೆ ಅರ್ಧ ರೊಟ್ಟಿ ತಿಂದಿದ್ದಾನೆ ಎನ್ನಲಾಗಿದೆ. ತುಂಬಾ ಸಮಯ ರೊಟ್ಟಿಯನ್ನೇ ದಿಟ್ಟಿಸುತ್ತಾ ಕುಳಿತಿದ್ದನಂತೆ. ನಂತರ ಹಸಿವಿಲ್ಲವೆಂದು ವಾಪಸ್ ನೀಡಿದ್ದಾನೆ. ಆರೋಗ್ಯ ಸರಿ ಇದೆಯಾ? ಡಾಕ್ಟರ್ ಕರೆಸಲಾ? ಎಂದು ಜೈಲಿನ ವಾರ್ಡನ್ ಕೇಳಿದಾಗ, ವೈದ್ಯರನ್ನು ಕರೆಸಿ ಎಂದು ಬಾಬಾ ಹೇಳಿದ್ದಾನೆ. ಡಾಕ್ಟರ್ ಬಂದು ತಪಾಸಣೆ ಮಾಡಿದಾಗ ಬಾಬಾ ಆರೋಗ್ಯ ಚೆನ್ನಾಗಿರುವುದು ತಿಳಿದುಬಂದಿದೆ. ಆ ಬಳಿಕ ರಾಮ್ ರಹೀಮ್ ಒಂದು ಗ್ಲಾಸ್ ಹಾಲು ಮತ್ತು ಔಷಧ ಸೇವಿಸಿದ್ದಾನೆ. ಊಟವಿಲ್ಲದೇ ಮಲಗುತ್ತಾನೆ. ಆದರೆ, ಜೈಲಿನ ಕೋಣೆಯಲ್ಲಿ ಬಾಬಾ ತನ್ನ ಮೊದಲ ರಾತ್ರಿಯಲ್ಲಿ ನಿದ್ರೆ ಮಾಡದೆ ಚಡಪಡಿಸುತ್ತಿದ್ದ ಎನ್ನಲಾಗ್ತಿದೆ.
ಕಠಿಣ ಶಿಕ್ಷೆಯಾದ್ದರಿಂದ ಜೈಲಿನಲ್ಲಿ ರಾಮ್ ರಹೀಂ ಮೈಬಗ್ಗಿಸಿ ದುಡಿಯಬೇಕಾಗುತ್ತದೆ. ಜೈಲಿನ ಕೆಲಸಕ್ಕಾಗಿ ನೀಡಲಾಗುವ ಫಾರ್ಮ್'ನ್ನು ಬಾಬಾ ಭರ್ತಿ ಮಾಡಿದ್ದು, ತನಗೆ ಫ್ಯಾಕ್ಟರಿಯಲ್ಲಿ ಕೆಲಸ ನೀಡುವಂತೆ ಮನವಿ ಮಾಡಿಕೊಂಡಿದ್ದಾನೆ. ಜೈಲಿನ ನಿಯಮದ ಪ್ರಕಾರ ರಾಮ್ ರಹೀಂ ಕೆಲಸ ಮಾಡಿದ್ರೆ ಆತನಿಗೆ ಪ್ರತಿದಿನ 40 ರೂಪಾಯಿ ಸಿಗಲಿದೆ.
