ರಾಜ್ಯಸಭೆಯ ಮೊದಲ ಉಪಸಭಾಪತಿ ಕನ್ನಡಿಗ

First Published 13, Mar 2018, 8:17 PM IST
First Deputy RS Speaker Kannadiga
Highlights

1962 ರಲ್ಲಿ ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾದ ಕೃಷ್ಣಮೂರ್ತಿ ರಾವ್, ಲೋಕಸಭೆ ಉಪ ಸ್ಪೀಕರ್ ಸ್ಥಾನಕ್ಕೆ ನೇಮಕ ಗೊಂಡರು

ರಾಜ್ಯಸಭೆಯ ಮೊದಲ ಉಪಸಭಾಪತಿ ಸ್ಥಾನ ಅಲಂಕರಿಸಿದ್ದವರು ಕನ್ನಡಿಗ ಎಸ್.ವಿ. ಕೃಷ್ಣಮೂರ್ತಿ ರಾವ್. ಚನ್ನಗಿರಿಯವರಾದ ಅವರು 1952ರಿಂದ 1962ರವರೆಗೆ ರಾಜ್ಯಸಭೆ ಸದಸ್ಯರಾಗಿದ್ದರು. ಅಷ್ಟೂ ದಿವಸ ರಾಜ್ಯಸಭೆ ಉಪ ಸಭಾಪತಿಯಾಗಿದ್ದರು.

1962 ರಲ್ಲಿ ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾದ ಕೃಷ್ಣಮೂರ್ತಿ ರಾವ್, ಲೋಕಸಭೆ ಉಪ ಸ್ಪೀಕರ್ ಸ್ಥಾನಕ್ಕೆ ನೇಮಕ ಗೊಂಡರು. ಆ ಹುದ್ದೆ ಅಲಂಕರಿಸಿದ ಮೊದಲ ಕನ್ನಡಿಗರೂಅವರೇ. ಕೃಷ್ಣಮೂರ್ತಿ ಅವರ ಬಳಿಕ ರಾಜ್ಯಸಭೆ ಉಪಸಭಾಪತಿ ಸ್ಥಾನ ಕನ್ನಡಿಗರೇ ಆದ ವಯಲೆಟ್ ಆಳ್ವಾ ಅವರಿಗೆ ಸಿಕ್ಕಿತ್ತು. ಯುಪಿಎ ಸರ್ಕಾರದ ಅವಧಿಯಲ್ಲಿ ರೆಹಮಾನ್ ಖಾನ್ ಅವರಿಗೆ ಈ ಹುದ್ದೆ ದೊರಕಿತ್ತು. ಒಟ್ಟಾರೆ ಮೂವರು ಕನ್ನಡಿಗರಷ್ಟೇ ಈ ಸ್ಥಾನ ಅಲಂಕರಿಸಿದ್ದಾರೆ.

loader