1984ರ ಸಿಖ್ ದಂಗೆ ತೀರ್ಪು ಪ್ರಕಟಿಸಿದ ದೆಹಲಿ ಕೋರ್ಟ್! ಹೊರಬಿತ್ತು ಸಿಖ್ ದಂಗೆ ಪ್ರಕರಣದ ಮೊಟ್ಟ ಮೊದಲ ತೀರ್ಪು! ಯಶಪಾಲ್ ಸಿಂಗ್‌ಗೆ ಗಲ್ಲು ಶಿಕ್ಷೆ ಹಾಗೂ ನರೇಶ್ ಶೇರಾವತ್‌ಗೆ ಜೀವಾವಧಿ ಶಿಕ್ಷೆ! ಇಬ್ಬರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಂದ ಆರೋಪ
ನವದೆಹಲಿ(ನ.20): ಭಾರಿ ಚರ್ಚೆಗೆ ಕಾರಣವಾಗಿದ್ದ 1984ರ ಸಿಖ್ ದಂಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಟ್ಟ ಮೊದಲ ತೀರ್ಪು ಹೊರಬಿದ್ದಿದ್ದು, ಇಬ್ಬರು ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ.
"
ಯಶಪಾಲ್ ಸಿಂಗ್‌ಗೆ ಗಲ್ಲು ಶಿಕ್ಷೆ ಹಾಗೂ ನರೇಶ್ ಶೇರಾವತ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ನವದೆಹಲಿಯ ಮಹಿಪಾಲಪುರದಲ್ಲಿ ಇಬ್ಬರು ಸಿಖ್ ಯುವಕರ ಮೇಲೆ ಹಲ್ಲೆ ನಡೆಸಲಾಗಿತ್ತು. ಆ ನಂತರ ನವೆಂಬರ್ 1, 1984ರಂದು ಇಬ್ಬರೂ ಮೃತಪಟ್ಟಿದ್ದರು. ಹರದೇವ್ ಸಿಂಗ್ ಹಾಗೂ ಅವತಾರ್ ಸಿಂಗ್ ಮೃತ ದುರ್ದೈವಿಗಳು.
1984ರ ಸಿಖ್ ದಂಗೆ ಬಗ್ಗೆ ಗೃಹ ಸಚಿವಾಲಯ 2015ರಲ್ಲಿ ವಿಶೇಷ ತನಿಖಾ ತಂಡ ರಚನೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
