ರಾಜ್ಯದಲ್ಲಿ ಮೊದಲ ಬಾರಿಗೆ ಸೈಬರ್ ಕ್ರೈಂ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆ ವಿಧಿಸಲಾಗಿದೆ. ಪರಿಚಿತ ಯುವತಿಗೆ ಅಶ್ಲೀಲ ಚಿತ್ರ ಕಳಿಸಿದ ವಕೀಲಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. 

ಬೆಂಗಳೂರು : ರಾಜ್ಯದಲ್ಲಿ ಮೊದಲ ಬಾರಿಗೆ ಸೈಬರ್ ಕ್ರೈಂ ಪ್ರಕರಣದಲ್ಲಿ ಶಿಕ್ಷೆಯಾಗಿದ್ದು, ತನ್ನ ಪರಿಚಿತ ಯುವತಿಯೊಬ್ಬಳಿಗೆ ಅಶ್ಲೀಲ ಫೋಟೋಗಳನ್ನು ಇ-ಮೇಲ್ ಮಾಡಿದ ತಪ್ಪಿಗೆ ಎರಡು ವರ್ಷಗಳ ಜೈಲುವಾಸಕ್ಕೆ ವಕೀಲ ರೊಬ್ಬರು ಗುರಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಂಗಳೂರಿನ ವಕೀಲ ಶಿವ ಪ್ರಸಾದ್ ಸಜ್ಜನ್ ಎಂಬುವರೇ ಶಿಕ್ಷೆಗೆ ಒಳಗಾಗಿದ್ದು, 2008 ರಲ್ಲಿ ಸೈಬರ್ ಕ್ರೈಂ ಠಾಣೆಯಲ್ಲಿ ಸಜ್ಜನ್ ವಿರುದ್ಧ ಅವರ ಪರಿಚಿತ ಯುವತಿ ದೂರು ಕೊಟ್ಟಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ 1ನೇ ಎಸಿಎಂಎಂ ನ್ಯಾಯಾಲಯವು, ಶುಕ್ರವಾರ ಆರೋಪಿಗೆ 25 ಸಾವಿರ ದಂಡ ಹಾಗೂ 2 ವರ್ಷಗಳು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. 

ನನ್ನ ಫೋಟೋಗಳನ್ನು ತಿರುಚಿ ಅಶ್ಲೀಲ ಫೋಟೋಗ ಳನ್ನು ಇ-ಮೇಲ್ ಮೂಲಕ ಸ್ನೇಹಿತರಿಗೆ ಕಳುಹಿಸಿ ಗೌರವಕ್ಕೆ ಕುಂದು ತಂದಿದ್ದಾರೆ ಎಂದು ಆರೋಪಿಸಿ ಸಜ್ಜನ್ ವಿರುದ್ಧ ಸಂತ್ರಸ್ತೆ ದೂರು ಕೊಟ್ಟಿದ್ದರು. ಅದರನ್ವಯ ಐಟಿ ಕಾಯ್ದೆ ಸೆಕ್ಷನ್ 67 ರ ಅಡಿ ಎಫ್‌ಐಆರ್ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, 1 ನೇ ಎಸಿಎಂಎಂ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು ಎಂದು ಸೈಬರ್ ವಿಭಾಗದ ಎಸ್ಪಿ ಸಚಿನ್ ಘೋರ್ಪಡೆ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.