ವಿಚಾರಣೆಗೆ ಕೋರ್ಟ್'ಗೆ ಆಗಮಿಸುತ್ತಿದ್ದ ನೊಟೋರಿಯಸ್ ಹಂತಕ ಬಾಗಪ್ಪ ಹರಿಜನ್ ಮೇಲೆ ಗುಂಡಿನ ದಾಳಿ
ಕೋರ್ಟ್'ಗೆ ವಿಚಾರಣೆಗೆ ಹಾಜರಾಗುತ್ತಿದ್ದ ಭೀಮಾ ತೀರದ ನೊಟೋರಿಯಸ್ ಹಂತಕ ಬಾಗಪ್ಪ ಹರಿಜನ್ ಮೇಲೆ ಗುಂಡಿನ ದಾಳಿ ನಡೆದಿದೆ.
ಬೆಂಗಳೂರು(ಆ.08): ಕೋರ್ಟ್'ಗೆ ವಿಚಾರಣೆಗೆ ಹಾಜರಾಗುತ್ತಿದ್ದ ಭೀಮಾ ತೀರದ ನೊಟೋರಿಯಸ್ ಹಂತಕ ಬಾಗಪ್ಪ ಹರಿಜನ್ ಮೇಲೆ ಗುಂಡಿನ ದಾಳಿ ನಡೆದಿದೆ.
ಬಾಗಪ್ಪನ ಮೇಲೆ ಐದು ಸುತ್ತಿನ ಗುಂಡಿನ ದಾಳಿ ನಡೆಸಿದ್ದಾರೆ. ಗಾಯಗೊಂಡ ಜಬಾಗಪ್ಪನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಜಯಪುರ ಕೋರ್ಟ್ ಆವರಣದಲ್ಲಿ ಈ ದಾಳಿ ನಡೆದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ನು ಈ ಕೊಲೆ ಪ್ರಯತ್ನದ ಹಿಂದೆ ಯಲ್ಲಪ್ಪ ಹರಿಜನ್ ಇದೆ ಎಂಬ ಮಾತುಗಳು ಕೂಡಾ ಕೇಳಿ ಬಂದಿವೆ. ಯಲ್ಲಪ್ಪ ಹರಿಜನ್ ಭೀಮಾ ತೀರದ ಅತ್ಯಂತ ನೊಟೋರಿಯಸ್ ಹಂತಕ ಚಂದಪ್ಪ ಹರಿಜನ್ ಅಣ್ಣ.
ಯಾರು ಈ ಬಾಗಪ್ಪ ಹರಿಜನ್?
ಭೀಮಾತೀರದ ಅತ್ಯಂತ ನೊಟೋರಿಯಸ್, ಉತ್ತರ ಕರ್ನಾಟಕದ ವೀರಪ್ಪನ್ ಎಂದೇ ಕರೆಯಲಾಗುವ ಹಂತಕ ಚಂದಪ್ಪ ಹರಿಜನ್ ಅಳಿಯ ಹಾಗೂ ಪಟ್ಟದ ಶಿಷ್ಯ ಈ ಬಾಗಪ್ಪ ಹರಿಜನ್. ಚಂದಪ್ಪ ಹರಿಜನ್ ಹೆಚ್ಚು ಕಡಿಮೆ 55 ಕೊಲೆ ಕೇಸ್'ಗಳ ಆರೋಪಿ. ಬಾಗಪ್ಪ ಚಿಕ್ಕ ವಯಸ್ಸಿನಲ್ಲೇ ಚಂದಪ್ಪನ ಗ್ಯಾಂಗ್ ಸೇರಿದ್ದ ಆತನೊಂದಿಗೇ ಓಡಾಡಿಕೊಂಡಿದ್ದ.
ಆದರೆ ಚಂದಪ್ಪ ಹರಿಜನ್ ಎನ್'ಕೌಂಟರ್ ಬಳಿಕ, ಚಂದಪ್ಪನ 13 ಗನ್'ಗಳನ್ನು ಹಂಚಿಕೊಳ್ಳುವ ವಿಚಾರದಲ್ಲಿ ಅಣ್ಣ ಯಲ್ಲಪ್ಪ ಹಾಗೂ ಅಳಿಯ ಬಾಗಪ್ಪರ ನಡುವೆ ದ್ವೇಷ ಬೆಳೆಯುತ್ತಿದೆ. ಅಲ್ಲದೇ ಕಲಬುರ್ಗಿಯ ಜಮೀನು ವಿಚಾರದಲ್ಲೂ ಇಬ್ಬರ ನಡುವೆ ವೈಮನಸ್ಸು ಬೆಳೆಯುತ್ತದೆ. ತಾನೇ ಚಂದಪ್ಪನ ಉತ್ತರಾಧಿಕಾರಿ ಎಂದು ಬಾಗಪ್ಪ ಹೇಳಿಕೊಳ್ಳಲಾರಂಭಿಸುತ್ತಾರೆ. ಇದರಿಂದಾಗಿ ಇಬ್ಬರೂ ಒಬ್ಬರನ್ನೊಬ್ಬರು ಹತ್ಯೆ ಮಾಡಲು ಯಲ್ಲಪ್ಪ ಯತ್ನಿಸುತ್ತಾರೆ.
ಈ ತಿಕ್ಕಾಟದಲ್ಲಿ ಬಾಗಪ್ಪನ ಇಬ್ಬರು ಅಳಿಯಂದಿರನ್ನು ಯಲ್ಲಪ್ಪ ಕೊಲೆ ಮಾಡುತ್ತಾನೆ ಈ ಆರೋಪದಡಿಯಲ್ಲಿ ಯಲ್ಲಪ್ಪ ಜೈಲು ಪಾಲಾಗುತ್ತಾನೆ. 2013ರಲ್ಲಿ ಚಂದಪ್ಪನ ತಮ್ಮನನ್ನು ಬಸವರಾಜ್'ನನ್ನು ಕೊಲೆ ಮಾಡಲಾಗುತ್ತದೆ, ಈ ಪ್ರಕರಣದಲ್ಲಿ ಬಾಗಪ್ಪ ಆರೋಪಿಯಾಗುತ್ತಾನೆ.
ಈ ರೀತಿಯಾಗಿ ಇಬ್ಬರ ನಡುವೆಯೂ ದ್ವೇಷ ಬೆಳೆಯುತ್ತದೆ.