ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿಗಳನ್ವಯ ಶುಭ ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಡಿಜೆ ಪ್ಲೇಯರ್ ಹಾಕಿದ್ದ ಹಾಡೊಂದಕ್ಕೆ ತನ್ನ ಮೇಲಿನ ನಿಯಂತ್ರಣ ಕಳೆದುಕೊಂಡ ಸಾಧ್ವಿ ಅಂಗರಕ್ಷಕನ ಕೈಯಲ್ಲಿದ್ದ ಗನ್ ತೆಗೆದುಕೊಂಡು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದನ್ನು ಕಂಡ ಅಂಗರಕ್ಷಕರೂ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ದುರಾದೃಷ್ಟವಶಾತ್ ಈ ಗುಂಡು ವರನ ಚಿಕ್ಕಮ್ಮನಿಗೆ ತಗುಲಿ ಸ್ಥಳದಲ್ಲೇ ಅಸು ನೀಗಿದ್ದು, ಐವರಿಗೆ ಗಾಯಗಳಾಗಿವೆ.
ನವದೆಹಲಿ(ನ.16): ನಿಶ್ಚಿತಾರ್ಥ ಸಮಾರಂಭವೊಂದರಲ್ಲಿ ಭಾಗವಹಿಸಲು ಬಂದಿದ್ದ ಸಾಧ್ವಿ ದೇವಾ ಠಾಕೂರ್'ರವರ ಸಾಧ್ವಿಯೊಬ್ಬರ ಉದ್ಧಟತನದಿಂದಾಗಿ ಮನೆಯಲ್ಲಿದ್ದ ಖುಷಿ ಒಂದೇ ಕ್ಷಣದಲ್ಲಿ ಶೋಕಾಚರಣೆಯಾಗಿ ಮಾರ್ಪಾಡಾದ ಘಟನೆ ಕರ್ನಾಲ್'ನಲ್ಲಿ ನಡೆದಿದೆ.
ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿಗಳನ್ವಯ ಶುಭ ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಡಿಜೆ ಪ್ಲೇಯರ್ ಹಾಕಿದ್ದ ಹಾಡೊಂದಕ್ಕೆ ತನ್ನ ಮೇಲಿನ ನಿಯಂತ್ರಣ ಕಳೆದುಕೊಂಡ ಸಾಧ್ವಿ ಅಂಗರಕ್ಷಕನ ಕೈಯಲ್ಲಿದ್ದ ಗನ್ ತೆಗೆದುಕೊಂಡು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದನ್ನು ಕಂಡ ಅಂಗರಕ್ಷಕರೂ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ದುರಾದೃಷ್ಟವಶಾತ್ ಈ ಗುಂಡು ವರನ ಚಿಕ್ಕಮ್ಮನಿಗೆ ತಗುಲಿ ಸ್ಥಳದಲ್ಲೇ ಅಸು ನೀಗಿದ್ದು, ಐವರಿಗೆ ಗಾಯಗಳಾಗಿವೆ.
ವಿಡಿಯೋದಲ್ಲಿ ಸಾಧ್ವಿ ಹಾಗೂ ಅಂಗರಕ್ಷಕರು ತಮ್ಮ ಸುತ್ತಮುತ್ತಲು ಯಾರೂ ನಿಂತಿಲ್ಲ ಎಂಬಂತೆ ಗುಂಡು ಹಾರಿಸಿರುವುದು ಸ್ಪಷ್ಟವಾಗಿ ಕಂಡು ಬಂದಿದೆ.
ಯಾರು ಈ ಸಾಧ್ವಿ ದೇವಾ ಠಾಕೂರ್?
- ಮೂಲತಃ ಹರ್ಯಾಣದವರಾಗಿರುವ ಈ ಸಾಧ್ವಿ ಹಿಂದೂ ಮಹಾಸಭೆಯ ನೇತಾರರಾಗಿದ್ದಾರೆ. ಈ ಮೊದಲೇ ವಿವಾದವನ್ನೂ ಸೃಷ್ಟಿಸಿದ್ದಾರೆ.
-ವಿದೇಶ ಪ್ರಯಾಣ, ಚಿನ್ನದ ಮೇಲೆ ಮೋಹ ಹಾಗೂ ಬಂದೂಕುಗಳ ಸಂಗ್ರಹಿಸುವ ಹವ್ಯಾಸ ಇವರಿಗಿದೆ.
-ದೇವಾ ಫೌಂಡೇಷನ್'ನ ಅಧ್ಯಕ್ಷರಾಗಿರುವ ಸಾಧ್ವಿ 2015ರಲ್ಲಿ ಮುಸ್ಲಿಂಮರ ಜನ ಸಂಖ್ಯೆ ಏರಿಕೆಯಾಗುತ್ತಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.
- ಕರ್ನಾಲ್'ನಲ್ಲಿ ತನ್ನ ಆಶ್ರಮ ನಿರ್ಮಿಸಿರುವ ಈ ಸಾಧ್ವಿ ಫೇಸ್'ಬುಕ್'ನಲ್ಲಿ ಬಂದೂಕುಗಳನ್ನು ಹಿಡಿದುಕೊಂಡಿರುವ ಫೋಟೋ ಅಪ್ಲೋಡ್ ಮಾಡುತ್ತಿರುತ್ತಾರೆ.
-500, 1000ರೂಪಾಯಿ ನೋಟ್ ಬ್ಯಾನ್ ವಿಚಾರವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದ ಸಾಧ್ವಿ ಹೊಸ ನೋಟುಗಳಲ್ಲಿ ಭಗತ್ ಸಿಂಗ್ ಫೋಟೋ ಪ್ರಿಂಟ್ ಮಾಡುವಂತೆ ಆಗ್ರಹಿಸಿದ್ದರು.