ರಾಷ್ಟ್ರ ರಾಜಧಾನಿಯಲ್ಲಿ ದೀಪಾವಳಿ ಪಟಾಕಿ ನಿಷೇಧ ಹೇರಿದ ಬಳಿಕ ಇದೀಗ ಪಂಜಾಬ್- ರ್ಯಾಣ ಹೈಕೋರ್ಟ್  ಕೂಡಾ ತಮ್ಮ ರಾಜ್ಯದಲ್ಲಿ ಪಟಾಕಿ ಹೊಡೆಯಲು ಸಮಯ ನಿಗದಿಪಡಿಸಿದೆ. ಪಂಜಾಬ್, ಬೆಳಿಗ್ಗೆ 6.30 ರಿಂದ ರಾತ್ರಿ 9.30 ರವರೆಗೆ ಮಾತ್ರ ಪಟಾಕಿ ಹೊಡೆಯಬಹುದು. 6.30 ಕ್ಕಿಂತ ಮುನ್ನ, ರಾತ್ರಿ 9.30 ರ ನಂತರ ಯಾರೂ ಕೂಡಾ ಪಟಾಕಿ ಹೊಡೆಯುವಂತಿಲ್ಲ ಎಂದು ನಿರ್ಬಂಧ ಹೇರಿದೆ.  

ನವದೆಹಲಿ (ಅ.13): ರಾಷ್ಟ್ರ ರಾಜಧಾನಿಯಲ್ಲಿ ದೀಪಾವಳಿ ಪಟಾಕಿ ನಿಷೇಧ ಹೇರಿದ ಬಳಿಕ ಇದೀಗ ಪಂಜಾಬ್- ರ್ಯಾಣ ಹೈಕೋರ್ಟ್ ಕೂಡಾ ತಮ್ಮ ರಾಜ್ಯದಲ್ಲಿ ಪಟಾಕಿ ಹೊಡೆಯಲು ಸಮಯ ನಿಗದಿಪಡಿಸಿದೆ. ಪಂಜಾಬ್, ಬೆಳಿಗ್ಗೆ 6.30 ರಿಂದ ರಾತ್ರಿ 9.30 ರವರೆಗೆ ಮಾತ್ರ ಪಟಾಕಿ ಹೊಡೆಯಬಹುದು. 6.30 ಕ್ಕಿಂತ ಮುನ್ನ, ರಾತ್ರಿ 9.30 ರ ನಂತರ ಯಾರೂ ಕೂಡಾ ಪಟಾಕಿ ಹೊಡೆಯುವಂತಿಲ್ಲ ಎಂದು ನಿರ್ಬಂಧ ಹೇರಿದೆ.

ಪಟಾಕಿ ಅಂಗಡಿಯನ್ನು ಇಡಲು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ. 20 ರಷ್ಟು ಅಂಗಡಿಗೆ ಮಾತ್ರ ಪರವಾನಗಿ ನೀಡಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಕೋರ್ಟ್ ಸೂಚಿಸಿದೆ. ಈ ಸಂಬಂಧ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಸೂಚಿಸಿದೆ.

ನ್ಯಾ. ಎ ಕೆ ಮಿತ್ತಲ್ ಮತ್ತು ಅಮಿತ್ ರಾವಲ್ ನೇತೃತ್ವದ ನ್ಯಾಯಪೀಠ ಈ ತೀರ್ಪು ನೀಡಿದೆ.