2014ರಲ್ಲಿ ಅಕಾರಕ್ಕೆ ಬಂದ ಬಳಿಕ ಮೋದಿ ಅವರು ಜಾತ್ಯಾತೀತ ಗುರಿ ಮತ್ತು ಆರ್ಥಿಕ ಅಭಿವೃದ್ಧಿಯ ಹೆಸರಿನಲ್ಲಿ ಹಿಂದುತ್ವ ಸಿದ್ಧಾಂತವನ್ನು ದೇಶದ ಮೇಲೆ ಹೇರುತ್ತಾ ಬರುತ್ತಿದ್ದಾರೆ.

ನ್ಯೂಯಾರ್ಕ್(ಮಾ.24): ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೂ ಸನ್ಯಾಸಿ ಆದಿತ್ಯನಾಥ್ ಅವರನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಹುದ್ದೆಗೆ ನೇಮಿಸಿರುವುದು ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಆಘಾತಕಾರಿ ಸಂಗತಿ ಎಂದು ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ಟೀಕಿಸಿದೆ. 2014ರಲ್ಲಿ ಅಕಾರಕ್ಕೆ ಬಂದ ಬಳಿಕ ಮೋದಿ ಅವರು ಜಾತ್ಯಾತೀತ ಗುರಿ ಮತ್ತು ಆರ್ಥಿಕ ಅಭಿವೃದ್ಧಿಯ ಹೆಸರಿನಲ್ಲಿ ಹಿಂದುತ್ವ ಸಿದ್ಧಾಂತವನ್ನು ದೇಶದ ಮೇಲೆ ಹೇರುತ್ತಾ ಬರುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಅಭೂತಪೂರ್ವ ಗೆಲುವು ಸಾಸುತ್ತಿದ್ದಂತೆ ತಮ್ಮ ನಿಜ ಸ್ವರೂಪವನ್ನು ಮೋದಿ ತೋರಿಸಿದ್ದಾರೆ. ಕಟು ಹಿಂದುತ್ವ ವಾದಿ ಆದಿತ್ಯನಾಥ್‌ಗೆ ಅಕಾರ ನೀಡಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ಸಂಪಾದಕೀಯ ಟೀಕಿಸಿದೆ.

Add Asianetnews Kannada as a Preferred SourcegooglePreferred