ತಾರೆಗಳು, ಉದ್ಯಮಿಗಳೇ ಹೆಚ್ಚು ವಾಸಿಸುವ ಮುಂಬೈನ  ಬಾಂದ್ರಾದ  16 ಅಂತಸ್ತಿನ ಲಾ ಮೇರ್‌ ಅಪಾರ್ಟ್‌ಮೆಂಟ್‌ನ 13ನೇ ಅಂತಸ್ತಿನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಅದೃಷವಶಾತ್ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ.  8 ಫೈರ್‌ ಎಂಜಿನ್‌ಗಳು ಕ್ಷಣಾರ್ಧದಲ್ಲೇ ಸ್ಥಳಕ್ಕೆ ದೌಡಾಯಿಸಿ ಸತತ 45  ನಿಮಿಷ  ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದವು.

ಮುಂಬೈ (ಅ.25): ತಾರೆಗಳು, ಉದ್ಯಮಿಗಳೇ ಹೆಚ್ಚು ವಾಸಿಸುವ ಮುಂಬೈನ ಬಾಂದ್ರಾದ 16 ಅಂತಸ್ತಿನ ಲಾ ಮೇರ್‌ ಅಪಾರ್ಟ್‌ಮೆಂಟ್‌ನ 13ನೇ ಅಂತಸ್ತಿನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಅದೃಷವಶಾತ್ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. 8 ಫೈರ್‌ ಎಂಜಿನ್‌ಗಳು ಕ್ಷಣಾರ್ಧದಲ್ಲೇ ಸ್ಥಳಕ್ಕೆ ದೌಡಾಯಿಸಿ ಸತತ 45 ನಿಮಿಷ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದವು.

 ಈ ಅಪಾರ್ಟ್‌ಮೆಂಟ್‌ನ 12 ನೇ ಅಂತಸ್ತಿನ ಫ್ಲಾಟ್​​​​ನಲ್ಲಿ ಬಾಲಿವುಡ್​ ನಟಿ ಐಶ್ವರ್ಯ ರೈ ತಾಯಿ ಬೃಂದಾ ರೈ ವಾಸಿಸುತ್ತಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಐಶ್ವರ್ಯ ರೈ ಮತ್ತು ಪತಿ ಅಭಿಷೇಕ್‌ ಬಚ್ಚನ್‌ ಸ್ಥಳಕ್ಕೆ ದೌಡಾಯಿಸಿದರು. ಆತಂಕಗೊಂಡಿದ್ದ ಐಶ್ವರ್ಯ, ಅಭಿಷೇಕ್ ಅಪಾರ್ಟ್‌ಮೆಂಟ್‌ನಲ್ಲಿದ್ದ ಬೃಂದಾ ರೈ ಯೋಗ ಕ್ಷೇಮ ವಿಚಾರಿಸಿದರು. ಅಪಾರ್ಟ್‌ಮೆಂಟ್‌ನ 10, 11ನೇ ಅಂತಸ್ತಿನಲ್ಲಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸಂಬಂಧಿಗಳು ವಾಸಿಸುತ್ತಿದ್ದಾರೆ ಎನ್ನಲಾಗಿದೆ.