ಬಿಜೆಪಿ ಜನ ಸುರಕ್ಷಾಯಾತ್ರೆ ಸಮಾವೇಶ ಆವರಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. 

ಮಂಗಳೂರು (ಮಾ. 06): ಬಿಜೆಪಿ ಜನ ಸುರಕ್ಷಾಯಾತ್ರೆ ಸಮಾವೇಶ ಆವರಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. 

ಇಲ್ಲಿನ ಕುಳಾಯಿ ಬಳಿ ನಡೆಯುತ್ತಿರುವ ಸಾರ್ವಜನಿಕ ಸಮಾವೇಶ ಆವರಣದಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದೆ. ಯಾರೋ ಸಿಗರೇಟ್ ಸೇದಿ ಬಿಸಾಡಿ ಹೋದ ಬಳಿಕ ಪೊದೆಗೆ ಬೆಂಕಿ ಹೊತ್ತಿಕೊಂಡಿದೆ. ವಂದೇ ಮಾತರಂ ಹಾಡುವ ವೇಳೆ ಧಗಧಗನೆ ಬೆಂಕಿ ಹೊತ್ತಿ ಉರಿದಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಬೆಂಕಿ ಆರಿಸುವ ಕಾರ್ಯ ಮಾಡುತ್ತಿದೆ. ಸಮಾವೇಶದಲ್ಲಿ ಬಿಜೆಪಿ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.