ರೀಜೆಂಟ್ ಪ್ಲಾಝಾ ಎಂಬ ಹೋಟೆಲ್’ನ ಅಡುಗೆಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಇತರ ಅಂತಸ್ತುಗಳಿಗೆ ಹಬ್ಬಿದೆ ಎಂದು ಹೇಳಲಾಗಿದೆ.  

ಕರಾಚಿ, ಪಾಕಿಸ್ತಾನ (ಡಿ.05): ಕರಾಚಿಯ ಐಷಾರಾಮಿ ಹೋಟೆಲ್ ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಹನ್ನೊಂದು ಮಂದಿ ಸಾವನಪ್ಪಿದ್ದಾರೆ ಎಂದು ವರದಿಯಾಗಿದೆ.

ರೀಜೆಂಟ್ ಪ್ಲಾಝಾ ಎಂಬ ಹೋಟೆಲ್’ನ ಅಡುಗೆಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಇತರ ಅಂತಸ್ತುಗಳಿಗೆ ಹಬ್ಬಿದೆ ಎಂದು ಹೇಳಲಾಗಿದೆ.

ಹೋಟೆಲ್’ನಲ್ಲಿ ಸುಮಾರು 400 ಕೋಣೆಗಳಿದ್ದು, 65ಕ್ಕಿಂತಲೂ ಹೆಚ್ಚು ಮಂದಿ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.